ಪುಂಜಾಲಕಟ್ಟೆ ಮಸೀದಿಯಲ್ಲಿ ಬಕ್ರೀದ್ ಆಚರಣೆ

ಪುಂಜಾಲಕಟ್ಟೆ : ಬದ್ರಿಯಾ ಜುಮಾ ಮಸೀದಿ ಪುಂಜಾಲಕಟ್ಟೆಯಲ್ಲಿ ಈದುಲ್ ಅದ್ಹಾ ಹಬ್ಬವನ್ನು ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಸರಳವಾಗಿ ಆಚರಿಸಲಾಯಿತು.
ಇಂದು ಬೆಳಗ್ಗೆ 7 ಗಂಟೆಗೆ ಈದ್ ನಮಾಝ್ ಹಾಗೂ ಖುತುಬಾ ಪಾರಾಯಣ ನೆರವೇರಿಸಲಾಯಿತು. ಇದಕ್ಕೂ ಮೊದಲು ಬಕ್ರೀದ್ ಸಂದೇಶ ಭಾಷಣ ಮಾಡಿದ ಖತೀಬ್ ಅಶ್ರಫ್ ಫೈಝಿ ಉಸ್ತಾದ್ ಈದುಲ್ ಅದ್ಹಾ ಪ್ರಯುಕ್ತ ನಡೆಸುವ ಬಲಿದಾನ ಮತ್ತು ಇಸ್ಲಾಮಿನ ಪವಿತ್ರ ಹಜ್ಜ್ ಕರ್ಮದ ಬಗ್ಗೆ ವಿವರಿಸಿದರು.
Next Story





