ದೇಶದಲ್ಲಿ ಸಕ್ರಿಯ ಕೋವಿಡ್ -19 ಪ್ರಕರಣಗಳು ಸತತ ಎರಡನೇ ದಿನವೂ ಹೆಚ್ಚಳ
ಹೊಸದಿಲ್ಲಿ: ದೈನಂದಿನ ಕೋವಿಡ್-19 ಕೊರೋನವೈರಸ್ ಸೋಂಕುಗಳು 41,383 ಏರಿಕೆಯಾಗಿದ್ದು, ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 3,12,57,720 ಕ್ಕೆ ತಲುಪಿದೆ. ಆದರೆ ಸಕ್ರಿಯ ಪ್ರಕರಣಗಳು ಸತತ ಎರಡನೇ ದಿನವೂ ಹೆಚ್ಚಳವನ್ನು ದಾಖಲಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.
507 ಹೊಸ ಸಾವು-ನೋವುಗಳೊಂದಿಗೆ ದೇಶದ ಕೋವಿಡ್-19 ಸಾವಿನ ಸಂಖ್ಯೆ 4,18,987 ಕ್ಕೆ ಏರಿಕೆಯಾಗಿದೆ.
ರಾಷ್ಟ್ರೀಯ ಕೋವಿಡ್-19 ಚೇತರಿಕೆ ಪ್ರಮಾಣವು ಶೇಕಡಾ 97.35 ರಷ್ಟಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಅಂಕಿ-ಅಂಶದಿಂದ ತಿಳಿದುಬಂದಿದೆ.
ದೇಶದಲ್ಲಿ ಕೋವಿಡ್-19 ಪತ್ತೆಗಾಗಿ ಬುಧವಾರ ಸುಮಾರು 17,18,439 ಪರೀಕ್ಷೆಗಳನ್ನು ನಡೆಸಲಾಯಿತು. ಇಲ್ಲಿಯವರೆಗೆ ಒಟ್ಟು 45,09,11,712 ಪರೀಕ್ಷೆ ನಡೆಸಲಾಗಿದೆ.
Next Story