ಅಸ್ಸಾಂ ಮುಖ್ಯಮಂತ್ರಿಗೆ ಬೀಫ್ 'ಗಿಫ್ಟ್' ನೀಡುತ್ತೇನೆಂದು ವಾಟ್ಸ್ ಆ್ಯಪ್ ಪೋಸ್ಟ್ ಹಾಕಿದ್ದ ಮಹಿಳೆಯ ಬಂಧನ

ಗುವಾಹಟಿ: ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಗೋಮಾಂಸವನ್ನು "ಉಡುಗೊರೆ" ನೀಡುವುದಾಗಿ ವಾಟ್ಸ್ ಆ್ಯಪ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಆರೋಪದ ಮೇಲೆ ಅಸ್ಸಾಂನ ನಲ್ಬಾರಿ ಜಿಲ್ಲೆಯ ಹಳ್ಳಿಯ ಮಹಿಳೆಯೊಬ್ಬರನ್ನು ಬಂಧಿಸಿ, ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ನಿನ್ನೆ ಮಹಿಳೆಯೊಬ್ಬರು ತನ್ನ ವಾಟ್ಸ್ ಆ್ಯಪ್ ಸ್ಟೇಟಸ್ ನಲ್ಲಿ 'ಆಕ್ಷೇಪಾರ್ಹ ಪೋಸ್ಟ್' ಅನ್ನು ಅಪ್‌ಲೋಡ್ ಮಾಡಿದ್ದಳು. ನಾವು ಪ್ರಕರಣ ದಾಖಲಿಸಿ ಬಂಧಿಸಿದ್ದೇವೆ. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಗೋವುಗಳ ಅಕ್ರಮ ಸಾಗಣೆ ಹಾಗೂ ಗೋಮಾಂಸ ಮಾರಾಟವನ್ನು ನಿಯಂತ್ರಿಸಲು ರಾಜ್ಯ ಸರಕಾರವು 2021 ರ ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆಯನ್ನು ಮಂಡಿಸಿದ ನಂತರ ಮೊದಲ ಬಾರಿಗೆ ಮಹಿಳೆಯೊಬ್ಬರು ಬಂಧನಕ್ಕೊಳಗಾದರು.
Next Story





