ಚಾರ್ಮಾಡಿ ಘಾಟಿ ರಸ್ತೆಯ 6ನೇ ತಿರುವಿನಲ್ಲಿ ರಸ್ತೆ ಬದಿ ಗುಡ್ಡ ಕುಸಿತ
![ಚಾರ್ಮಾಡಿ ಘಾಟಿ ರಸ್ತೆಯ 6ನೇ ತಿರುವಿನಲ್ಲಿ ರಸ್ತೆ ಬದಿ ಗುಡ್ಡ ಕುಸಿತ ಚಾರ್ಮಾಡಿ ಘಾಟಿ ರಸ್ತೆಯ 6ನೇ ತಿರುವಿನಲ್ಲಿ ರಸ್ತೆ ಬದಿ ಗುಡ್ಡ ಕುಸಿತ](https://www.varthabharati.in/sites/default/files/images/articles/2021/07/23/299891-1627019599.gif)
ಬೆಳ್ತಂಗಡಿ, ಜು.23: ಚಾರ್ಮಾಡಿ ಘಾಟಿ ರಸ್ತೆಯ ಆರನೇ ತಿರುವಿನ ಬಳಿ ಮಳೆ ನೀರು ಹರಿದು, ರಸ್ತೆಯಲ್ಲಿ ಬಿರುಕು ಉಂಟಾಗಿ ಶುಕ್ರವಾರ ಬೆಳಗ್ಗೆ ಸಣ್ಣಮಟ್ಟಿನ ಗುಡ್ಡ ಕುಸಿತ ಉಂಟಾಗಿದೆ.
ಇಲ್ಲಿ ಕಳೆದ ವರ್ಷ ದೊಡ್ಡ ಪ್ರಮಾಣದ ಭೂ ಕುಸಿತವಾಗಿತ್ತು. ಅಲ್ಲಿ ತಡೆಗೋಡೆಯನ್ನು ನಿರ್ಮಿಸಲಾಗಿದ್ದು, ಅದಕ್ಕೆ ತಾಗಿಕೊಂಡಿರುವ ಪ್ರದೇಶದಲ್ಲಿ ಹೊಸದಾಗಿ ಭೂ ಕುಸಿತ ಸಂಭವಿಸಿದೆ. ಕುಸಿತದಿಂದಾಗಿ ವಾಹನ ಸಂಚಾರಕ್ಕೆ ಯಾವುದೇ ಅಡಚಣೆಯಾಗಿಲ್ಲ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಲಿದ್ದು ಬಳಿಕವಷ್ಟೆ ಕುಸಿತದಿಂದ ರಸ್ತೆಗೆ ಹಾನಿಯಾಗಿದೆಯೇ ಎಂದು ತಿಳಿದು ಬರಲಿದೆ.
ಬೆಳ್ತಂಗಡಿ ತಾಲೂಕಿನಾದ್ಯಂತ ಶುಕ್ರವಾರ ಬೆಳಗ್ಗಿನಿಂದಲೂ ಭಾರೀ ಮಳೆ ಸುರಿಯುತ್ತಿದೆ.
Next Story