ಬೆಂಗಳೂರು: ರೌಡಿಗಳು ಹಾಗೂ ಸಹಚರರ 45 ಮನೆಗಳ ಮೇಲೆ ಸಿಸಿಬಿ ದಾಳಿ
ಬೆಂಗಳೂರು, ಜು.23: ನಗರದ ಹಲವು ರೌಡಿಗಳ ಹಾಗೂ ಅವರ ಸಹಚರರು ಸೇರಿ 45 ಮನೆಗಳ ಮೇಲೆ ಇಂದು ಬೆಳಗ್ಗೆ ಸಿಸಿಬಿ ಪೊಲೀಸರು ದಾಳಿ ಮಾಡಿ ನಡೆಸಿದ್ದಾರೆ. ಈ ವೇಳೆ ನಗದು ಹಾಗೂ ಡ್ರ್ಯಾಗರ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗ್, ಸೈಕಲ್ ರವಿ, ಸೈಲೆಂಟ್ ಸುನೀಲ್ ಹಾಗೂ ಜೆಸಿಬಿ ನಾರಾಯಣ ಹಾಗೂ ಅವರ ಸಹಚರರದ್ದು ಸೇರಿ 45 ಮನೆಗಳ ಮೇಲೆ ಜಂಟಿ ಆಯುಕ್ತ ಸಂದೀಪ್ ಪಾಟೀಲ ಹಾಗೂ ಡಿಸಿಪಿಗಳ ನೇತೃತ್ವದ ತಂಡಗಳು ದಾಳಿ ನಡೆಸಿವೆ.
ಇತ್ತೀಚೆಗಷ್ಟೇ ನಗರದ ರೌಡಿಗಳು ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈಗ ಮತ್ತೆ ರೌಡಿ ವಿರುದ್ಧದ ಕಾರ್ಯಾಚರಣೆ ಮುಂದುವರಿಸಿದ್ದಾರೆ.
Next Story