ನನ್ನ ಎಲ್ಲ ಫೋನ್ ಗಳನ್ನು ಟ್ಯಾಪ್ ಮಾಡಲಾಗಿದೆ: ರಾಹುಲ್ ಗಾಂಧಿ ಆರೋಪ

ಹೊಸದಿಲ್ಲಿ: ಸರಕಾರವು ಪೆಗಾಸಸ್ ಸ್ಪೈವೇರ್ ಅನ್ನು ವಿರೋಧಿಗಳ ವಿರುದ್ಧ ಶಸ್ತ್ರಾಸ್ತ್ರವಾಗಿ ಬಳಸುತ್ತಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ, "ನಾನು ಸಂಭಾವ್ಯ ಗುರಿಯಾಗಿರಲಿಲ್ಲ. ನನ್ನ ಎಲ್ಲಾ ಫೋನ್‌ಗಳನ್ನು ಟ್ಯಾಪ್ ಮಾಡಲಾಗಿದೆ'' ಎಂದು ಹೇಳಿದ್ದಾರೆ.
ಎಲ್ಲದರ ಬಗ್ಗೆ ವರದಿ ಮಾಡಲು ನನ್ನ ಭದ್ರತಾ ಸಿಬ್ಬಂದಿಯನ್ನು ಕೇಳಲಾಗಿದೆ ಎಂದು ಆರೋಪಿಸಿದ ರಾಹುಲ್ , ಪೆಗಾಸಸ್ ಹಗರಣವನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ಮಾಡಬೇಕೆಂದು ಒತ್ತಾಯಿಸಿದರು.
"ನಾನು 'ಸಂಭಾವ್ಯ ಗುರಿ' ಅಲ್ಲ. ನನ್ನ ಫೋನ್ ಟ್ಯಾಪ್ ಮಾಡಲಾಗಿದೆ. ಅದನ್ನು ಸ್ಪಷ್ಟವಾಗಿ ಟ್ಯಾಪ್ ಮಾಡಲಾಗಿದೆ. ಈ ಫೋನ್ ಮಾತ್ರವಲ್ಲ, ನನ್ನ ಎಲ್ಲಾ ಫೋನ್‌ಗಳನ್ನು ಟ್ಯಾಪ್ ಮಾಡಲಾಗಿದೆ" ಎಂದು ಕಾಂಗ್ರೆಸ್ ನಾಯಕ ಸುದ್ದಿಗಾರರಿಗೆ ತಿಳಿಸಿದರು.
ಇಸ್ರೇಲಿ ಕಂಪನಿ ಎನ್‌ಎಸ್‌ಒನ ಸ್ಪೈವೇರ್ ಪೆಗಾಸಸ್‌ನ ಸೋರಿಕೆಯಾದ ಡೇಟಾಬೇಸ್‌ನಲ್ಲಿ ರಾಹುಲ್ ಗಾಂಧಿ ಸಂಭಾವ್ಯ ಗುರಿಗಳ ಪಟ್ಟಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಪೆಗಾಸಸ್ ಅನ್ನು ಸರಕಾರಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ. ಪ್ರತಿಪಕ್ಷದ ನಾಯಕರು, ಇಬ್ಬರು ಕೇಂದ್ರ ಸಚಿವರು, ಉದ್ಯಮಿ ಅನಿಲ್ ಅಂಬಾನಿ, ಮಾಜಿ ಸಿಬಿಐ ಮುಖ್ಯಸ್ಥ, ವೈರಾಲಜಿಸ್ಟ್ ಹಾಗೂ 40 ಪತ್ರಕರ್ತರು ಭಾರತದ 300 ಫೋನ್‌ಗಳ ಪಟ್ಟಿಯಲ್ಲಿದ್ದಾರೆ. ಆದಾಗ್ಯೂ, ಎಲ್ಲಾ ಫೋನ್ ಗಳನ್ನು ಹ್ಯಾಕ್ ಮಾಡಲಾಗಿದೆಯೇ ಎಂದು ಇನ್ನೂ ಖಚಿತವಾಗಿಲ್ಲ.







