ಒಡಿಶಾ: ಶೌಚಗುಂಡಿಯಲ್ಲಿ ಉಸಿರುಗಟ್ಟಿ ಮೂವರು ಮೃತ್ಯು

ಭುವನೇಶ್ವರ: ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ ಕಟ್ಟಡ ಕಾರ್ಮಿಕ ಸೇರಿದಂತೆ ಮೂವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ಮೂವರು ಒಳಗಿನಿಂದ ಶಟರ್ ತೆಗೆಯಲು ಹೊಸದಾಗಿ ನಿರ್ಮಿಸಲಾದ ಶೌಚ ಗುಂಡಿಗೆ ಪ್ರವೇಶಿಸಿದ್ದರು.
"ಬಿಕ್ರಾಂಪುರ್ ಗ್ರಾಮದ ಟಿ ಸಿಧೇಸು ರೆಡ್ಡಿಗಾಗಿ ಶೌಚಗುಂಡಿ ನಿರ್ಮಾಣದ ಮೇಲ್ವಿಚಾರಣೆ ನಡೆಸುತ್ತಿದ್ದ ಮುಖ್ಯ ಮಸ್ತ್ರಿ ಸದಾನಂದ ರೆಡ್ಡಿ ಅವರು ಮೊದಲು ಮ್ಯಾನ್‌ಹೋಲ್ ಮೂಲಕ ಪ್ರವೇಶಿಸಿ ಶಟ್ಟರಿಂಗ್ ಅನ್ನು ತೆಗೆದುಹಾಕಿದರು. ಸದಾನಂದ್ ಹೊರಗೆ ಬಾರದಿದ್ದಾಗ, ಸಿಧೇಸು ಅವರ ಇಬ್ಬರು ನೆರೆಹೊರೆಯವರಾದ ಕೃಷ್ಣ ರೆಡ್ಡಿ ಹಾಗೂ ಪಿ. ತರೇನಿ ರೆಡ್ಡಿ ಕೂಡ ಶೌಚ ಗುಂಡಿ ಒಳಗೆ ಹೋದರು. ಮೂವರಲ್ಲಿ ಯಾರೂ ಹೊರಬರದಿದ್ದಾಗ, ಸಿಧೇಸು ಅಗ್ನಿಶಾಮಕ ದಳದ ಸಹಾಯವನ್ನು ಕೋರಿದರು. ಮೂವರು ಉಸಿರುಗಟ್ಟಿ ಸಾವನ್ನಪ್ಪಿರಬಹುದು”ಎಂದು ಬೆಹ್ರಾಂಪುರ ಪೊಲೀಸ್ ವರಿಷ್ಠಾಧಿಕಾರಿ ಪಿನಾಕ್ ಮಿಶ್ರಾ ಹೇಳಿದ್ದಾರೆ.
Next Story





