ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ವರ್ಣರಂಜಿತ ಚಾಲನೆ

photo : twitter/@Tokyo2020hi
ಟೋಕಿಯೊ: ಕೊರೋನ ಸಾಂಕ್ರಾಮಿಕ ರೋಗದಿಂದಾಗಿ ಒಂದು ವರ್ಷ ಮುಂದೂಡಿಕೆಯಾಗಿದ್ದ ಟೋಕಿಯೊ ಒಲಿಂಪಿಕ್ ಗೇಮ್ಸ್ ನ ಉದ್ಘಾಟನಾ ಸಮಾರಂಭವು ಶುಕ್ರವಾರ ಸುಡುಮದ್ದುಗಳ ಸಿಡಿತದೊಂದಿಗೆ ಖಾಲಿ ಕ್ರೀಡಾಂಗಣದ ಸಮ್ಮುಖದಲ್ಲಿ ವರ್ಣರಂಜಿತವಾಗಿ ನೆರವೇರಿತು.
68,000 ಪ್ರೇಕ್ಷಕರ ಸಾಮರ್ಥ್ಯದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡದ ಸಮಾರಂಭದಲ್ಲಿ ಜಪಾನ್ ಚಕ್ರವರ್ತಿ ನರುಹಿಟೊ, ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಹಾಗೂ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಸೇರಿದಂತೆ ಕೆಲವೇ ನೂರು ಅಧಿಕಾರಿಗಳು ಮತ್ತು ಗಣ್ಯರು ಹಾಜರಿದ್ದರು. ಚಕ್ರವರ್ತಿ ನರುಹಿಟೊ ಕ್ರೀಡಾಕೂಟ ಆರಂಭವಾಯಿತು ಎಂದು ಅಧಿಕೃತವಾಗಿ ಘೋಷಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶಿಸಲಾದ ಬಣ್ಣಗಳು ಜಪಾನಿನ ಸಂಸ್ಕೃತಿಯ ಸೌಂದರ್ಯವನ್ನು ತೋರ್ಪಡಿಸಿದವು.
ಉದ್ಘಾಟನಾ ಸಮಾರಂಭದಲ್ಲಿ ಸರ್ವೇ ಸಾಮಾನ್ಯವಾಗಿರುವ ಸಾಮೂಹಿಕ ನೃತ್ಯ ಸಂಯೋಜನೆ, ಬೃಹತ್ ರಂಗಪರಿಕರಗಳು ಹಾಗೂ ನರ್ತಕರು, ನಟರು ಇಲ್ಲದೆ ನಡೆಯುತ್ತಿದೆ.
ಪಥಸಂಚಲನದಲ್ಲಿ ಭಾರತದ ಧ್ವಜಧಾರಿಗಳಾಗಿ ಬಾಕ್ಸರ್ ಮೇರಿ ಕೋಮ್ ಹಾಗೂ ಹಾಕಿ ಆಟಗಾರ ಮನ್ ಪ್ರೀತ್ ಸಿಂಗ್ ಭಾಗವಹಿಸಿದರು.