ರೈತ ನಾಯಕನ ಜೇಬಿನಲ್ಲಿ ಕಾಂಡೋಮ್ ಪ್ಯಾಕೆಟ್: ಸತ್ಯಾಂಶವೇನು?

ಹೊಸದಿಲ್ಲಿ: ಇಲ್ಲಿನ ಜಂತರ್ ಮಂತರ್ ನಲ್ಲಿ ಪ್ರತಿಭಟನಾ ನಿರತ ರೈತರು ರೈತರ ಪಾರ್ಲಿಮೆಂಟ್ ಅನ್ನು ಪ್ರಾರಂಭಿಸಿದ ಬಳಿಕ ಪ್ರತಿಭನೆಯಲ್ಲಿ ತಿರುವುಗಳು ಕಂಡು ಬಂದಿವೆ. ಈ ನಡುವೆ ಪ್ರತಿಭಟನ ನಿರತ ರೈತರ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುವುದು ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಪ್ರತಿಭಟನಾನಿರತ ರೈತನೋರ್ವ ಜೇಬಿನಲ್ಲಿ ಕಾಂಡೋಮ್ ಚಿತ್ರವಿರುವ ಫೋಟೊವೊಂದು ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ. ಆದರೆ, ಇದು ರೈತರ ಪ್ರತಿಭಟನೆಯ ಕುರಿತು ತಪ್ಪು ಸಂದೇಶಗಳನ್ನು ಹರಡಲು ಬಳಸಿರುವ ತಿರುಚಲ್ಪಟ್ಟ ಚಿತ್ರವಾಗಿದೆ ಎಂದು altnews.com ವರದಿ ಮಾಡಿದೆ.

ಇದೇ ಚಿತ್ರವನ್ನು ಹಲವಾರು ಮಂದಿ ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಆದರೆ ಈ ಕುರಿತು altnews ವರದಿಯ ಸಂದರ್ಭದಲ್ಲಿ ಈ ಫೋಟೊವನ್ನು ಮೇ 3, 2021ರದ್ದು ಎಂದು ಗುರುತಿಸಲಾಗಿದೆ. ಆ ಚಿತ್ರದಲ್ಲಿ ಅವರ ಜೇಬಿನಲ್ಲಿ ಯಾವುದೇ ಕಾಂಡೋಮ್ ಪ್ಯಾಕೇಟ್ ಗಳು ಇರಲಿಲ್ಲ ಎಂದು ವರದಿ ತಿಳಿಸಿದೆ.

ಇದೇ ಚಿತ್ರವನ್ನ 2018ರಲ್ಲಿ ಟ್ರಿಬ್ಯೂನ್ ಮಾಧ್ಯಮವು ಪ್ರಕಟಿಸಿತ್ತು. ಫೋಟೊದಲ್ಲಿ ಕಾಣಿಸುವ ವ್ಯಕ್ತಿಯ ಹೆಸರನ್ನು ಸುಚಾ ಸಿಂಘ್ ಲಂಘಾ ಎಂದು ಗುರುತಿಸಲಾಗಿದೆ. ಅವರು ಶಿರೋಮಣಿ ಅಕಾಲಿ ದಳದ ಮಾಜಿ ಸಚಿವರೆಂದು ಗುರುತಿಸಲಾಗಿದೆ. ಅವರು ಪಂಜಾಬ್ ಸರಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.







