90 ಶೇಕಡ ಗಡಿ ತಾಲಿಬಾನ್ ನಿಯಂತ್ರಣದಲ್ಲಿದೆ ಎಂಬುವುದು ಸಂಪೂರ್ಣ ಸುಳ್ಳು: ಅಫ್ಘಾನ್

ಸಾಂದರ್ಭಿಕ ಚಿತ್ರ
ಕಾಬೂಲ್ (ಅಫ್ಘಾನಿಸ್ತಾನ), ಜು. 23: ಅಫ್ಘಾನಿಸ್ತಾನದ 90 ಶೇಕಡ ಗಡಿ ಪ್ರದೇಶಗಳು ತನ್ನ ನಿಯಂತ್ರಣದಲ್ಲಿದೆ ಎಂಬ ತಾಲಿಬಾನ್ ನ ಹೇಳಿಕೆ ‘ಸಂಪೂರ್ಣ ಸುಳ್ಳು’ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ಶುಕ್ರವಾರ ಹೇಳಿದೆ. ಗಡಿಗಳು ಸರಕಾರಿ ಪಡೆಗಳ ನಿಯಂತ್ರಣದಲ್ಲಿವೆ ಎಂದು ಅದು ಹೇಳಿದೆ.
‘‘ಇದು ಆಧಾರರಹಿತ ಅಪಪ್ರಚಾರ’’ ಎಂದು ರಕ್ಷಣಾ ಸಚಿವಾಲಯದ ಉಪ ವಕ್ತಾರ ಫಾವದ್ ಅಮನ್ ಎಎಫ್ಪಿ ಸುದ್ದಿ ಸಂಸ್ಥೆಗೆ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದರು. ಅಫ್ಘಾನಿಸ್ತಾನದ 90 ಶೇಕಡದಷ್ಟು ಗಡಿಗಳು ತನ್ನ ನಿಯಂತ್ರಣದಲ್ಲಿದೆ ಎಂಬುದಾಗಿ ತಾಲಿಬಾನ್ ಗುರುವಾರ ಹೇಳಿಕೊಂಡಿತ್ತು. ಇದನ್ನು ಸ್ವತಂತ್ರವಾಗಿ ಖಚಿತಪಡಿಸಲು ಸಾಧ್ಯವಾಗಿಲ್ಲ ಎಂದು ಎಎಫ್ಪಿ ಹೇಳಿದೆ.
Next Story





