ಶ್ರೀನಿವಾಸ್ ಆಸ್ಪತ್ರೆಯಲ್ಲಿ ‘ಡ್ಯುವೋಡೆನಲ್ ಅಲ್ಸರ್ ರಂಧ್ರ’ ಯಶಸ್ವಿ ಶಸ್ತ್ರಚಿಕಿತ್ಸೆ
ಐದು ವರ್ಷದ ಮಕ್ಕಳಲ್ಲಿ ಕಂಡುಬರುವ ಅಪರೂಪದ ಕಾಯಿಲೆ

ಮಂಗಳೂರು, ಜು. 23: ನಗರದ ಪ್ರತಿಷ್ಠಿತ ಶ್ರೀನಿವಾಸ್ ಆಸತ್ರೆಯಲ್ಲಿ ತೀವ್ರ ಉಸಿರಾಟದ ತೊಂದರೆಯೊಂದಿಗೆ ಡ್ಯುವೋಡೆನಲ್ ಅಲ್ಸರ್ ರಂಧ್ರ (Duodenal Ulcer Perforation with Severe Respritory Distress) ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಯಿತು.
ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮಗುವಿನ ಹೊಟ್ಟೆ ಊದಿಕೊಂಡಿದ್ದು, ಉಸಿರಾಡಲು ಏದುಸಿರು ಬಿಡುತ್ತಿತ್ತು. ತಕ್ಷಣವೇ ಶ್ರೀನಿವಾಸ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಎಚ್ಚೆತ್ತು, ಆ ಮಗುವಿಗೆ ಚಿಕಿತ್ಸೆ ನೀಡಲು ಮುಂದಾದರು. ಆ ಕ್ಷಣದಲ್ಲಿ ಭುವಿತ್ರ ಆಕ್ಸಿಜನ್ ಸ್ಯಾಚುಟರೇಶನ್ (ಆಮ್ಲಜನಕ ಶುದ್ಧತ್ವ)ಶೇ.70ರಷ್ಟಿತ್ತು. ತಕ್ಷಣವೇ ಮಕ್ಕಳ ತಜ್ಞ ಶಸ್ತ್ರಚಿಕಿತ್ಸಕ ಡಾ. ಸುಹಾಸ್ ಹಾಗೂ ಡಾ. ವಿ.ಪಿ. ಸಿಂಗ್ ತೀವ್ರ ನಿಗಾ ಘಟಕಕ್ಕೆ ಧಾವಿಸಿ, ಶಸ್ತ್ರ ಚಿಕಿತ್ಸೆ ನೀಡಿದರು.
ಭುವಿತ್ ಸ್ಥಿರವಾದ ಆತನ ಹೊಟ್ಟೆಯಲ್ಲಿ ಗಾಳಿ ತುಂಬಿದ್ದು, ರಂಧ್ರ ಇರುವುದು ಎಕ್ಸ್ ರೇಯಿಂದ ಬೆಳಕಿಗೆ ಬಂದಿತು. ನುರಿತ ವೈದ್ಯಕೀಯ ತಂಡದ ಸಹಕಾರದೊಂದಿಗೆ ಅಸ್ವಸ್ಥಗೊಂಡಿರುವ ಮಗುವಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಡಾ.ಪ್ರಶಾಂತ್ ನೇತೃತ್ವದಲ್ಲಿ ಅರಿವಳಿಕೆ ಕಾರ್ಯಾಚರಣೆಯನ್ನು ಉತ್ತಮವಾಗಿ ನಿರ್ವಹಿಸಿತು. ಐದು ವರ್ಷದ ಮಗುವಿನಲ್ಲಿ ಅಪರೂಪವಾಗಿ ಕಾಣಸಿಗುವ ಈ ರಂದ್ರ ಸಣ್ಣ ಕರುಳಿನ ಮೊದಲ ಭಾಗದಲ್ಲಿತ್ತು. ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಭುವಿತ್‌ನನ್ನು ಇಲೆಕ್ಟಿವ್ ಪೋಸ್ಟ್ ಓಪರೇಟಿವ್ ವೆಂಟಿಲೇಟರ್‌ನಲ್ಲಿ ಇರಿಸಲಾಯಿತು.
ಭುವಿತ್ ವೆಂಟಿಲೇಟರ್‌ನಿಂದ 4ನೇ ದಿನ ಹೊರಬಂದರು. ಚಿಕಿತ್ಸೆಯ ಗಾಯದ ಆರೈಕೆಗೆ 8ನೇ ದಿನ ಐಸಿಯುನಿಂದ ವಾರ್ಡ್‌ಗೆ ಸ್ಥಳಾಂತರಿಸಲಾಯಿತು. 6ನೇ ದಿನದಿಂದ ಆಹಾರ ಹಾಗೂ ದ್ರವ್ಯ ಪದಾರ್ಥಗಳನ್ನು ಸೇವಿಸಲು ಸಲಹೆ ನೀಡಿದರು. 10ನೇ ದಿನದ ವೇಳೆಗೆ ಬೆಂಬಲದೊಂದಿಗೆ ನಿಂತಿದ್ದರು. 16ನೇ ದಿನದಂದು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.







