ಉಡುಪಿ : ಕೋವಿಡ್‌ಗೆ 131 ಪಾಸಿಟಿವ್ ; ಓರ್ವ ಬಲಿ

ಉಡುಪಿ, ಜು. 23: ಜಿಲ್ಲೆಯಲ್ಲಿ ಶುಕ್ರವಾರ ಕೊರೋನಕ್ಕೆ 131 ಮಂದಿ ಪಾಸಿಟಿವ್ ಬಂದಿದ್ದು, ವೃದ್ಧರೊಬ್ಬರು ಬಲಿಯಾಗಿದ್ದಾರೆ. ದಿನದಲ್ಲಿ 117 ಮಂದಿ ಗುಣಮುಖರಾಗಿದ್ದು, 847 ಮಂದಿ ಸೋಂಕಿಗೆ ಇನ್ನೂ ಸಕ್ರಿಯರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಇಂದು ಕೋವಿಡ್-19 ಸೋಂಕಿಗೆ ಉಡುಪಿಯ 61 ವರ್ಷ ಪ್ರಾಯದ ಪುರುಷರೊಬ್ಬರು ಬಲಿಯಾಗಿದ್ದಾರೆ.ಈ ಮೂಲಕ ಒಟ್ಟಾರೆ ಮೃತರಾದವರ ಸಂಖ್ಯೆ 409ಕ್ಕೇರಿದೆ. ಹೃದಯ ಸಮಸ್ಯೆ, ಮಧುಮೇಹದಿಂದ ಬಳಲಿದ್ದ ಇವರು ಕೋವಿಡ್ ಗುಣಲಕ್ಷಣ, ಉಸಿರಾಟದ ತೊಂದರೆ ಹಾಗೂ ನ್ಯುಮೋನಿಯಾಕ್ಕಾಗಿ ಜು.20ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ಚಿಕಿತ್ಸೆ ಫಲಕಾರಿ ಯಾಗದೇ ಮೃತಪಟ್ಟಿದ್ದಾರೆ.
ದಿನದಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟ 131 ಮಂದಿಯಲ್ಲಿ 58 ಮಂದಿ ಪುರುಷರು ಹಾಗೂ 73 ಮಂದಿ ಮಹಿಳೆಯರು. ಉಡುಪಿ ತಾಲೂಕಿನ 59, ಕುಂದಾಪುರ ತಾಲೂಕಿನ 36, ಕಾರ್ಕಳ ತಾಲೂಕಿನ 34 ಹಾಗೂ ಹೊರಜಿಲ್ಲೆಯ ಇಬ್ಬರು ಪಾಸಿಟಿವ್ ಬಂದಿದ್ದಾರೆ. ಇವರಲ್ಲಿ 21 ಮಂದಿ ಕೋವಿಡ್ ಆಸ್ಪತ್ರೆ ಹಾಗೂ ಉಳಿದ 110 ಮಂದಿ ಮನೆಯಲ್ಲೇ ಚಿಕಿತ್ಸೆಯಲ್ಲಿದ್ದಾರೆ.
ಗುರುವಾರ 117 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 67,518ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 3760 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆ ಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 68,774ಕ್ಕೇರಿದೆ ಎಂದು ಡಾ.ಉಡುಪ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 7,55,313 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.







