ದಲಿತ ಮುಖ್ಯಮಂತ್ರಿ ಮಾಡಿ ನಳಿನ್ ಆಸೆ ಈಡೇರಿಸಿಕೊಳ್ಳಲಿ: ಹರೀಶ್ ಕುಮಾರ್

ಮಂಗಳೂರು, ಜು.23: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಬಹುದಿನಗಳ ಬಯಕೆಯಂತೆ ರಾಜ್ಯದಲ್ಲಿ ಬಿಜೆಪಿಗೆ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡಲು ಸೂಕ್ತ ಕಾಲ ಕೂಡಿ ಬಂದಿದೆ. ಹಾಗಾಗಿ ಅವರು ದಲಿತ ಮುಖ್ಯಮಂತ್ರಿ ಮಾಡಿ ತನ್ನಾಸೆ ಈಡೇರಿಸಿಕೊಳ್ಳಲಿ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹಾರೈಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು ದಲಿತರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬ ತಮ್ಮ ಮನದಾಳದ ಬಯಕೆ ಯನ್ನು ನಳಿನ್ ಇತ್ತೀಚಿಗೆ ವ್ಯಕ್ತಪಡಿಸಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ನಳಿನ್ ಶಿಫಾರಸು ಮಾಡಿದ್ದರು. ಸದ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಬೀಳಲಿರುವುದರಿಂದ ಬಿಜೆಪಿಯ ದಲಿತ ಮುಖಂಡರೊಬ್ಬರನ್ನು ಮುಖ್ಯಮಂತ್ರಿ ಮಾಡಲು ಅವಕಾಶ ಲಭಿಸಲಿದೆ. ನಳಿನ್ ಕಾಂಗ್ರೆಸ್ ಮುಖಂಡರಿಗೆ ಪುಕ್ಕಟೆ ಸಲಹೆ ನೀಡುವ ಬದಲು ಈಗ ದೊರೆತಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿ ಎಂದು ಹರೀಶ್ ಕುಮಾರ್ ಒತ್ತಾಯಿಸಿದ್ದಾರೆ.
Next Story





