ಹಲ್ಲೆ ಪ್ರಕರಣ : ತಲೆ ಮರೆಸಿಕೊಂಡ ಆರೋಪಿ ಪೊಲೀಸ್ ವಶಕ್ಕೆ
ಪುತ್ತೂರು : 2 ವರ್ಷಗಳ ಹಿಂದೆ ನಡೆದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣೆಯ ಪೊಲೀಸರು ಪತ್ತೆ ಹಚ್ಚಿ ಬಂಧಿಸಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪುತ್ತೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಪೆರ್ನೆ ಸಮೀಪದ ಗಡಿಯಾರ್ ಎಂಬಲ್ಲಿನ ನಿವಾಸಿ ಮಜೀದ್ (45) ಬಂಧಿತ ಆರೋಪಿ.
ಈತ 2020ರ ನ. 20ರಂದು ಗಡಿಯಾರ್ ಸಮೀಪದ ಹೋಟೆಲ್‍ವೊಂದರ ಮುಂಭಾಗದಲ್ಲಿ 8 ಜನರ ತಂಡದೊಂದಿಗೆ ಆಗಮಿಸಿ ಅಬ್ದುಲ್ ಅಝೀಝ್ ಎಂಬವರಿಗೆ ಹಲ್ಲೆ ನಡೆಸಿದ್ದರು ಎನ್ನಲಾಗಿದ್ದು, ಉಳಿದ ಆರೋಪಿಗಳನ್ನು ಆ ಸಂದರ್ಭದಲ್ಲಿ ಬಂಧಿಸಿ ಬಳಿಕ ನ್ಯಾಯಾಲಯದಿಂದ ಬಿಡುಗಡೆ ಹೊಂದಿದ್ದರು. ಈ ಪೈಕಿ ಮಜೀದ್ ತಲೆಮರೆಸಿಕೊಂಡಿದ್ದನು. ಈ ಸಂಬಂಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಖಚಿತ ಮಾಹಿತಿಯಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಅವರ ಮಾರ್ಗದರ್ಶನದಲ್ಲಿ ಪುತ್ತೂರು ನಗರ ಠಾಣೆಯ ಇನ್ಸ್ ಪೆಕ್ಟರ್ ಗೋಪಾಲ್ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಟ್ವಾಳ ತಾಲೂಕಿನ ಗೂಡಿನಬಳಿ ಎಂಬಲ್ಲಿಂದ ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.





