ಖಾಝಿ ಅಸ್ಸಯ್ಯಿದ್ ಉಮರುಲ್ ಫಾರೂಖ್ ಅಲ್ ಬುಖಾರಿ ತಂಙಳ್ 6ನೇ ಉರೂಸ್ ನೇರ್ಚೆ

ಮಂಜೇಶ್ವರ : ಖಾಝಿ ಅಸ್ಸಯ್ಯಿದ್ ಉಮರುಲ್ ಫಾರೂಖ್ ಅಲ್ ಬುಖಾರಿ ತಂಙಳ್ 6ನೇ ಉರೂಸ್ ಮಳ್ ಹರ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ಕೇರಳ ಮುಸ್ಲಿಂ ಜಮಾಹತ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಖಾದರ್ ಮದನಿ ಧ್ವಜಾರೋಹಣ ನೆರವೇರಿಸಿದರು.
ಸಯ್ಯಿದ್ ಜಲಾಲುದ್ದೀನ್ ತಂಙಳ್ ಮಖಾಂ ಝಿಯಾರತ್ ಗೆ ನೇತೃತ್ವ ವಹಿಸಿದ್ದರು. ಸಯ್ಯಿದ್ ಶಹೀರ್ ಅಲ್ ಬುಖಾರಿ ತಂಙಳ್ ಅವರ ಪ್ರಾರ್ಥನೆ ಯೊಂದಿಗೆ ಆರಂಭಿಸಿದ ಮೌಲೀದ್ ಮಜ್ಲಿಸ್ ಗೆ ಮಹಮ್ಮದ್ ಸ್ವಾಲಿಹ್ ಸಅದಿ ತಲಳಿಪ್ಪರಂಬ್ ನೇತೃತ್ವ ವಹಿಸಿದ್ದರು.
ಕೇರಳ ಮುಸ್ಲಿಂ ಜಮಾಹತ್ ಜಿಲ್ಲಾ ಅಧ್ಯಕ್ಷರಾದ ಬಿ.ಎಚ್ ಅಬ್ದುಲ್ಲ ಕುಂಙ್ಞಿ ಫೈಝಿ, ಎಸ್. ಎಂ. ಎ ಜಿಲ್ಲಾ ಅಧ್ಯಕ್ಷರಾದ ಕೊಲ್ಲಂಬಾಡಿ ಅಬ್ದುಲ್ ಖಾದರ್ ಸಅದಿ, ಪಾತೂರ್ ಮುಹಮ್ಮದ್ ಸಖಾಫಿ, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಮೂಸ ಸಖಾಫಿ ಕಳತ್ತೂರ್, ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ, ಇಸ್ಮಾಯಿಲ್ ಸಅದಿ ಪಾರಪ್ಪಳಿ, ಝಕರಿಯ್ಯ ಫೈಝಿ, ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ, ಹಸ್ಸನ್ ಸಅದಿ, ಸುಬೈರ್ ಸಖಾಫಿ, ಸಿದ್ದೀಖ್ ಸಅದಿ ತೌಡುಗೋಳಿ, ಜಾಬೀರ್ ಸಖಾಫಿ, ಹಸನ್ ಕುಂಙ್ಞಿ, ಅಬ್ದುಲ್ ರೌಫ್ ಮಿಸ್ಬಾಹಿ, ಸಿದ್ದೀಖ್ ಹಾಜಿ ಮಂಗಳೂರು, ಪಳ್ಳಿಕುಂಙ್ಞಿ ಹಾಜಿ ಮುಂತಾದವರು ಭಾಗವಹಿಸಿದ್ದರು.





