ಒಲಿಂಪಿಕ್ಸ್: ಶೂಟರ್ ಸೌರಭ್ ಚೌಧರಿ ಫೈನಲ್ ರೌಂಡ್ ಗೆ ತೇರ್ಗಡೆ
photo: AFP
ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನ ಪುರುಷರ 10 ಮೀ. ಏರ್ ಪಿಸ್ತೂಲ್ ಕ್ವಾಲಿಫಿಕೇಶನ್ ಸುತ್ತಿನಲ್ಲಿ ಅಗ್ರ ಸ್ಥಾನ ಪಡೆದಿರುವ ವಿಶ್ವದ ನಂ.2ನೇ ಶೂಟರ್ ಸೌರಭ್ ಚೌಧರಿ ಫೈನಲ್ ಸುತ್ತಿಗೆ ತೇರ್ಗಡೆಯಾದರು. ವಿಶ್ವದ ನಂ.1 ಶೂಟರ್ ಅಭಿಷೇಕ್ ವರ್ಮಾ 17ನೇ ಸ್ಥಾನ ಪಡೆದು ಫೈನಲ್ ತಲುಪಲು ವಿಫಲರಾದರು.
ಒಟ್ಟು 586 ಸ್ಕೋರ್ ಗಳಿಸಿರುವ ಸೌರಭ್ ಫೈನಲ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದು ಪದಕದ ಸುತ್ತಿಗೆ ತಲುಪಿದರು. ಅರ್ಹತಾ ಸುತ್ತಿನಲ್ಲಿ ಅಗ್ರ-8 ರಲ್ಲಿ ಸ್ಥಾನ ಪಡೆದ ಶೂಟರ್ ಗಳು ಫೈನಲ್ ತಲುಪುತ್ತಾರೆ.
10 ಮೀ. ಏರ್ ರೈಫಲ್ ಮಹಿಳಾ ಸ್ಪರ್ಧೆಯಲ್ಲಿ ವಲರಿವನ್ ಹಾಗೂ ಅಪೂರ್ವಿ ಚಾಂಡೇಲ ಫೈನಲ್ ಗೆ ತಲುಪಲು ವಿಫಲರಾಗಿದ್ದಾರೆ.
Next Story