ಟೋಕಿಯೊ ಒಲಿಂಪಿಕ್ಸ್ 2020: ಬೆಳ್ಳಿ ಗೆದ್ದ ವೇಟ್ ಲಿಫ್ಟರ್ ಮೀರಾ ಬಾಯಿ ಚಾನು

Photo: twitter/SunRisers
ಟೋಕಿಯೊ: ಒಲಿಂಪಿಕ್ಸ್ನ ಮೊದಲ ದಿನದಂದು ಭಾರತ ಇದೇ ಮೊದಲ ಬಾರಿಗೆ ಪದಕ ಗೆದ್ದುಕೊಂಡಿದೆ. ಮಹಿಳೆಯರ 49 ಕೆ.ಜಿ .ವಿಭಾಗದ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಜಯಿಸಿ ದಾಖಲೆ ಬರೆದಿದ್ದಾರೆ. ವೇಟ್ಲಿಫ್ಟಿಂಗ್ನಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ವೇಟ್ ಲಿಫ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಪದಕ ಬೇಟೆ ಆರಂಭವಾಗಿದೆ.
ವೇಟ್ಲಿಫ್ಟರ್ ಮೀರಾಬಾಯಿ ಚಾನು ಮಹಿಳೆಯರ 49 ಕೆ.ಜಿ. ವಿಭಾಗದ ಸ್ನ್ಯಾಚ್ನಲ್ಲಿ ಅತ್ಯುತ್ತಮ 87 ಕೆಜಿ ಎತ್ತಿ ಹಿಡಿದರೆ ಕ್ಲೀನ್ - ಜರ್ಕ್ ನಲ್ಲಿ 115 ಕೆಜಿ ಎತ್ತಿದರು. ಈ ಮೂಲಕ ಒಟ್ಟು 202 ಕೆಜಿ ತೂಕವನ್ನು ಎತ್ತಿ ಹಿಡಿದರು. ಒಟ್ಟು 210 ಕೆ.ಜಿ ತೂಕ ಎತ್ತಿ ಹಿಡಿದು ಹೊಸ ಒಲಿಂಪಿಕ್ಸ್ ದಾಖಲೆಯೊಂದಿಗೆ ಚೀನಾದ ಝಿಹುಯಿ ಹೋವು ಚಿನ್ನ ಗೆದ್ದಿದ್ದಾರೆ. ಒಟ್ಟು 194 ಕೆ.ಜಿ. ತೂಕವನ್ನು ಎತ್ತುವ ಮೂಲಕ ಇಂಡೋನೇಷ್ಯಾದ ಕ್ಯಾಂಟಿಕಾ ಐಸಾ ಕಂಚು ಗೆದ್ದುಕೊಂಡರು.
Next Story