ಪದಕದ ಭರವಸೆ ಮೂಡಿಸಿದ್ದ ಶೂಟರ್ ಸೌರಭ್ ಚೌಧರಿಗೆ 7ನೇ ಸ್ಥಾನ

photo: Twitter
ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನ ಪುರುಷರ 10 ಮೀ. ಏರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಅಗ್ರ ಸ್ಥಾನ ದೊಂದಿಗೆ ಫೈನಲ್ ಸುತ್ತಿಗೆ ತಲುಪಿದ್ದ ವಿಶ್ವದ ನಂ.2ನೇ ಆಟಗಾರ ಸೌರಭ್ ಚೌಧರಿ 7ನೇ ಸ್ಥಾನ ಪಡೆದು ನಿರಾಸೆಗೊಳಿಸಿದರು.
ಅರ್ಹತಾ ಸುತ್ತಿನಲ್ಲಿ ಒಟ್ಟು 586 ಅಂಕ ಗಳಿಸಿ ಅಮೋಘ ಪ್ರದರ್ಶನ ನೀಡಿ ಪದಕದ ಭರವಸೆ ಮೂಡಿಸಿದ್ದ 19ರ ಹರೆಯದ ಶೂಟರ್ ಚೌಧರಿ 8 ಶೂಟರ್ ಗಳು ಸ್ಪರ್ಧಿಸಿರುವ ಫೈನಲ್ ಸುತ್ತಿನಲ್ಲಿ 137.4 ಸ್ಕೋರ್ ಗಳಿಸಿ ಭಾರೀ ನಿರಾಸೆಗೊಳಿಸಿದರು.
ಅರ್ಹತಾ ಸುತ್ತಿನಲ್ಲಿ ವಿಶ್ವದ ನಂ.1 ಆಟಗಾರ ಅಭಿಷೇಕ್ ವರ್ಮಾ 17ನೇ ಸ್ಥಾನ ಪಡೆದು ಫೈನಲ್ ತಲುಪಲು ವಿಫಲರಾದರು.
Next Story