ಡಾ.ವೀರೇಂದ್ರ ಹೆಗ್ಗಡೆಯಿಂದ ಆಸ್ಕರ್ ಫೆರ್ನಾಂಡೀಸರ ಯೋಗಕ್ಷೇಮ ವಿಚಾರಣೆ

ಮಂಗಳೂರು, ಜು.24: ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ರಾಜಕಾರಣಿ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಅವರನ್ನು ಶನಿವಾರ ಭೇಟಿ ಮಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಆಸ್ಕರ್ ಫೆರ್ನಾಂಡೀಸ್‌ರ ಯೋಗಕ್ಷೇಮ ವಿಚಾರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೆಗ್ಗಡೆ ಉಡುಪಿಯಲ್ಲಿ ಹುಟ್ಟಿ ಬೆಳೆದ ಆಸ್ಕರ್ ಫೆರ್ನಾಂಡೀಸ್ ನೆಹರೂ ಕುಟುಂಬಕ್ಕೆ ತೀರಾ ಆತ್ಮೀಯರಾಗಿದ್ದರು. ಬಹುಬೇಗನೆ ರಾಜ್ಯ, ರಾಷ್ಟ್ರಕಾರಣದಲ್ಲಿ ಅವರು ಮಿಂಚಿದರು. ಅವರ ಸೇವೆ ಇನ್ನೂ ನಾಡಿನ ಜನತೆಗೆ ಬೇಕಾಗಿದೆ. ಹಾಗಾಗಿ ಅವರು ಶೀಘ್ರ ಗುಣಮುಖರಾಗಿ ಬರಲಿ’ ಎಂದರು.ಈ ಸಂದರ್ಭ ಮಾಜಿ ಸಚಿವ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಪಕ್ಷದ ಮುಖಂಡರಾದ ಎಂ.ಎ.ಗಫೂರ್, ಶಶಿಧರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
Next Story





