ಬೈಂದೂರು: ಗಾಳಿ-ಮಳೆಗೆ ಶೌಚಾಲಯಕ್ಕೆ ಹಾನಿ
ಉಡುಪಿ, ಜು.24: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಗಾಳಿ-ಮಳೆ ಯಿಂದ ಬೈಂದೂರು ತಾಲೂಕು ನಾಡ ಗ್ರಾಮದ ಹೆರಿಯ ಇವರ ಮನೆಯ ಶೌಚಾಲಯದ ಮಾಡು ಗಾಳಿಗೆ ಹಾರಿಹೋಗಿದೆ.
ಬೈಂದೂರು ತಾಲೂಕು ಹೆರಂಜಾಲು ಗ್ರಾಮದ ಸೀತಾರಾಮ ಇವರ ವಾಸದ ಮನೆ ಗಾಳಿ-ಮಳೆಯಿಂದ ಭಾಗಶ: ಹಾನಿಗೊಂಡಿದ್ದು 50,000ರೂ.ನಷ್ಟವಾಗಿದೆ. ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಕೃಷ್ಣ ಶೆಟ್ಟಿ ಇವರ ಮನೆಯ ಗೋಡೆ ಕುಸಿದು 30,000ರೂ., ಕಾಪು ತಾಲೂಕು ಕಳತ್ತೂರು ಗ್ರಾಮದ ರಾಜೀವಿ ಶೆಟ್ಟಿಗಾರ್ ಇವರ ಮನೆಗೆ 25,000ರೂ. ಹಾನಿಯುಂಟಾಗಿರುವುದಾಗಿ ವರದಿಗಳು ಬಂದಿವೆ.
Next Story





