Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕಾಲವನ್ನು ನಿಲ್ಲಿಸಿದರೆ...?

ಕಾಲವನ್ನು ನಿಲ್ಲಿಸಿದರೆ...?

ಆರ್. ಬಿ. ಗುರುಬಸವರಾಜಆರ್. ಬಿ. ಗುರುಬಸವರಾಜ25 July 2021 9:50 AM IST
share
ಕಾಲವನ್ನು ನಿಲ್ಲಿಸಿದರೆ...?

ಅದೊಂದು ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿದೆ. ಕಾರ್ತಿಕನಿಗೆ ಅದಾವುದೋ ಶಕ್ತಿ ಆವಾಹನೆಯಾಗಿದೆ. ಎಲ್ಲವೂ ತಾನೆಣಿಸಿದಂತೆ ನಡೆಯುತ್ತಿದೆ. ಪ್ರಕೃತಿಯೂ ಸಹ ತನ್ನ ಮಾತನ್ನು ಕೇಳುತ್ತಿದೆ. ಪಂಚಭೂತಗಳೆನಿಸಿದ ಭೂಮಿ, ಬಾನು, ಅಗ್ನಿ, ವಾಯು, ವರುಣ ಎಲ್ಲವೂ ತನ್ನ ಆಣತಿಯಂತೆ ನಡೆದುಕೊಳ್ಳುತ್ತಿವೆ. ಭೂಮಿಯ ಮೇಲಿನ ಪ್ರತಿಯೊಂದು ಚರಾಚರ ವಸ್ತುವು ತನ್ನ ಆಣತಿಗಾಗಿ ಕಾಯುತ್ತಿವೆ. ಪ್ರಾಣಿ, ಪಕ್ಷಿ, ಗುಡ್ಡ, ಬೆಟ್ಟ, ನದಿ, ಸಾಗರ, ಸರೋವರ ಹೀಗೆ ಸಕಲವೂ ಕಾರ್ತಿಕ ಹೇಳಿದಂತೆ ಕೇಳುತ್ತಿವೆ. ಅವನು ಚಲಿಸು ಎಂದರೆ ಚಲಿಸುತ್ತವೆ, ನಿಲ್ಲು ಎಂದರೆ ನಿಲ್ಲುತ್ತವೆ. ಕಾರ್ತಿಕ ತನ್ನ ಶಕ್ತಿಯನ್ನು ಪರೀಕ್ಷಿಸಲು ಎಲ್ಲಾ ಚರಾಚರ ವಸ್ತುಗಳಿಗೂ ‘ಸ್ತಬ್ಧ’ ಎಂಬ ಆದೇಶ ನೀಡಿದ ಮುರುಕ್ಷಣವೇ ನೀರು ಹರಿಯುತ್ತಿಲ್ಲ. ಗಾಳಿ ಬೀಸುತ್ತಿಲ್ಲ, ಸಮುದ್ರದಲ್ಲಿ ಅಲೆಗಳು ಏಳುತ್ತಿಲ್ಲ, ಗುಡುಗು ಮಿಂಚುಗಳ ಅಬ್ಬರವಿಲ್ಲ, ಮೋಡಗಳೆಲ್ಲ ಚಲಿಸದೆ ಹಾಗೆಯೇ ನಿಂತುಕೊಂಡಿವೆ. ಪ್ರಾಣಿ, ಪಕ್ಷಿಗಳಲ್ಲೂ ಚಲನೆಯಿಲ್ಲ. ಇಡೀ ಜಗತ್ತು ಸ್ತಬ್ಧ್ದವಾಯಿತು. ಅವನಿಗೆ ಇದು ಅಚ್ಚರಿ ಎನಿಸಿತು. ಜೊತೆಗೆ ಏನೋ ಒಂಥರಾ ಖುಷಿ ಎನಿಸಿತು. ಇಡೀ ಜಗತ್ತು ಹೇಗಿದೆ ಒಮ್ಮೆ ನೋಡಬೇಕೆನಿಸಿತು. ಹೆಜ್ಜೆ ಮುಂದಿಡಲು ಪ್ರಯತ್ನಿಸುತ್ತಾನೆ. ಆಗುತ್ತಿಲ್ಲ. ತನ್ನ ಚಲನೆಯೂ ಸ್ಥಬ್ದವಾಗಿದೆ. ಮಾತನಾಡಲು ಪ್ರಯತ್ನಿಸುತ್ತಾನೆ. ಬಾಯಿಂದ ಶಬ್ದ ಹೊರಡುತ್ತಿಲ್ಲ. ಯಾವುದೋ ಅಗೋಚರ ಶಕ್ತಿ ತನ್ನನ್ನು ಕಟ್ಟಿಹಾಕಿದೆ ಎಂದುಕೊಂಡ. ಇದರಿಂದ ಹೊರಬರಲು ತನ್ನ ಆದೇಶವನ್ನು ಹಿಂಪಡೆಯಬೇಕೆನಿಸಿತು. ತಕ್ಷಣವೇ ‘ಚಲನೆ’ ಎಂದ. ಮರುಕ್ಷಣವೇ ಇಡೀ ಜಗತ್ತು ಜೀವತಳೆದಂತೆ ಎಲ್ಲವೂ ಚಲಿಸತೊಡಗಿದವು. ತನ್ನ ಚಲನೆಯನ್ನು ಪರೀಕ್ಷಿಸಲು ಒಂದು ಹೆಜ್ಜೆ ಮುಂದಿಟ್ಟ. ತಕ್ಷಣವೇ ಮಂಚದಿಂದ ಕೆಳಕ್ಕೆ ಬಿದ್ದ. ಓಹೋ ಇದುವರೆಗೂ ತಾನು ಕಂಡದ್ದು ಕನಸು ಎಂಬ ಅರಿವಾಯಿತು. ಬಿದ್ದ ಸದ್ದಿಗೆ ಹೊರಗಡೆಯಿಂದ ಬಂದ ತಂದೆ ‘‘ಯಾಕೋ ಏನಾಯ್ತು? ಎಂದರು. ಏನೂ ಇಲ್ಲ ಪಪ್ಪಾ, ಏನೋ ಒಂದು ರೀತಿಯ ಕನಸು ಬಿದ್ದಿತ್ತು’’ ಎಂದು ಹಾಸಿಗೆ ತೆಗೆದಿಟ್ಟು ಮುಖತೊಳೆಯಲು ಹೊರನಡೆದ.

ಮುಖತೊಳೆದು ಕಾಫಿ ಹೀರಿದ ನಂತರ ತನ್ನ ಕನಸಿನ ಬಗ್ಗೆ ತಂದೆಗೆ ತಿಳಿಸುತ್ತಾ ‘‘ಪಪ್ಪಾ,ಒಂದು ವೇಳೆ ನಾವು ಕಾಲವನ್ನು ನಿಲ್ಲಿಸಿದರೆ ಏನಾಗುತ್ತೆ?’’ ಎಂದು ಪ್ರಶ್ನಿಸಿದ. ಆಗಲೇ ತಂದೆಗೆ ಅವನ ಕನಸಿನ ಸಾರಾಂಶ ಅರ್ಥವಾಗಿತ್ತು. ಅವನು ಕನಸಿನಲ್ಲಿ ಕಂಡದ್ದು ಕಾಲವನ್ನು ನಿಲ್ಲಿಸಿದರೆ ಏನಾಗುತ್ತೆ ಎಂಬುದೇ ಆಗಿತ್ತು. ಅದನ್ನು ಇನ್ನಷ್ಟು ವಿವರಗಳೊಂದಿಗೆ ತಿಳಿಸಲು ಸನ್ನದ್ಧರಾದರು.

ಕಾಲವನ್ನು ನಿಲ್ಲಿಸಿದರೆ ಏನಾಗುತ್ತೆ? ಎಂಬುದು ನಿಜಕ್ಕೂ ಊಹಾತೀತ ಮತ್ತು ಪ್ರಶ್ನಾತೀತ. ಏಕೆಂದರೆ ಕಾಲವನ್ನು ನಿಲ್ಲಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ನಿಖರವಾದ ಉತ್ತರಗಳಿಲ್ಲ. ಆದರೆ ಕಾಲವನ್ನು ನಿಲ್ಲಿಸಿದರೆ ಏನಾಗಬಹುದು ಎಂಬುದನ್ನು ಕೇವಲ ತಾರ್ಕಿಕವಾಗಿ ಚಿಂತಿಸಬಹುದೇ ಹೊರತು ವಾಸ್ತವದಲ್ಲಿ ಸದ್ಯಕ್ಕೆ ಸಾಧ್ಯವಿಲ್ಲ. ಒಂದು ವೇಳೆ ಕಾಲವನ್ನು ನಿಲ್ಲಿಸಿದರೆ ಕನಸಿನಲ್ಲಿ ಕಂಡಂತೆ ಎಲ್ಲವೂ ಸ್ತಬ್ಧ್ದವಾಗುತ್ತವೆ. ಅಂದರೆ ನೀರು ಹರಿಯುವುದಿಲ್ಲ, ಗಾಳಿ ಬೀಸುವುದಿಲ್ಲ, ನೀರಿನಲ್ಲಿ ಅಲೆಗಳು ಉಂಟಾಗುವುದಿಲ್ಲ, ಶಬ್ದದ ಉತ್ಪತ್ತಿ ಮತ್ತು ಪ್ರಸರಣ ಇಲ್ಲ. ಪ್ರಾಣಿ ಪಕ್ಷಿಗಳ ಚಲನೆ ಇಲ್ಲ. ಹೀಗೆ ಎಲ್ಲವೂ ಸ್ತಬ್ಧ್ದವಾಗುತ್ತದೆ.

ಕಾಲವನ್ನು ನಿಲ್ಲಿಸಿದರೆ, ಕಾಲ ನಿಂತು ಹೋಗಿದೆ ಎಂಬುದು ನಮ್ಮ ಗಮನಕ್ಕೂ ಬರುವುದೇ ಇಲ್ಲ. ಏಕೆಂದರೆ ಕಾಲ(ಸಮಯ)ವನ್ನು ಗುರುತಿಸಲು ನಮ್ಮ ಪಂಚೇಂದ್ರಿಯಗಳು ಸಹ ಕೆಲಸ ನಿಲ್ಲಿಸಿರುತ್ತವೆ. ಕಾಲವನ್ನು ನಿಲ್ಲಿಸಿದರೆ ನಾವು ಏನನ್ನೂ ನೋಡಲೂ ಸಾಧ್ಯವಾಗುವುದಿಲ್ಲ. ಬೆಳಕಿನ ಕಣಗಳು ಸಾಮಾನ್ಯವಾಗಿ ಬೆಳಕಿನ ವೇಗದಲ್ಲಿ(3 ಲಕ್ಷ ಕಿ.ಮೀ./ಸೆಕೆಂಡ್) ಚಲಿಸುತ್ತವೆ. ಹಾಗಾಗಿ ಬೆಳಕು ಇಲ್ಲದ ಕಾರಣ ವಸ್ತುಗಳೂ ಕಾಣಿಸುವುದಿಲ್ಲ. ಅಲ್ಲದೆ ನಮಗೆ ಶಬ್ದವೂ ಕೇಳಿಸುವುದಿಲ್ಲ. ಸಮಯದ ನಿಲುಗಡೆಯಿಂದಾದ ಶಾಖದ ವ್ಯತ್ಯಾಸದಿಂದ ಮಾರುತಗಳ(ಗಾಳಿ) ಬೀಸುವಿಕೆ ನಿಲ್ಲುತ್ತದೆ. ಶಬ್ದ ಪ್ರಸಾರಕ್ಕೆ ಗಾಳಿ ಮಾಧ್ಯಮವಾಗಿದೆ. ನಿರ್ವಾತ ವಾತಾವರಣ ಶಬ್ದ ಪ್ರಸಾರವಾಗುವುದಿಲ್ಲ.

ಕಾಲವನ್ನು ನಿಲ್ಲಿಸಿದರೆ ಶ್ವಾಸಕೋಶಕ್ಕೆ ಸರಬರಾಜಾಗುವ ಆಮ್ಲಜನಕದ ಅಣುಗಳ ಚಲನೆಯೂ ನಿಲ್ಲುತ್ತದೆ. ಇದರಿಂದ ಉಸಿರಾಟ ಹಾಗೂ ದೇಹಕ್ಕೆ ಬೇಕಾದ ಶಕ್ತಿಯ ಸರಬರಾಜು ನಿಲ್ಲುತ್ತದೆ. ಕ್ರಮೇಣವಾಗಿ ಶಕ್ತಿಯನ್ನು ಕಳೆದುಕೊಂಡ ದೇಹವು ಅಶಕ್ತವಾಗಿ ಕುಸಿಯುತ್ತದೆ. ಇದನ್ನು ಕೋಮಾ ಸ್ಥಿತಿ ಎನ್ನುತ್ತೇವೆ. ಮಾತನಾಡಲು, ಕೈಕಾಲು ಆಡಿಸಲು ಆಗದ ಸ್ಥಿತಿ ನಿರ್ಮಾಣವಾಗುತ್ತದೆ. ಈಗ ನಾವು ಕಣ್ಣಿದ್ದು ಕುರುಡರು, ಕಿವಿಯಿದ್ದೂ ಕಿವುಡರು ಹಾಗೂ ಬಾಯಿ ಇದ್ದೂ ಮೂಗರು ಎನ್ನುವಂತಾಗುತ್ತದೆ.

ಕಾಲವನ್ನು ನಿಲ್ಲಿಸಿದರೆ ಉಷ್ಣ ಹಾಗೂ ಶೀತದ ಅನುಭವ ತಿಳಿಯುವುದೇ ಇಲ್ಲ. ಏಕೆಂದರೆ ಉಷ್ಣ ಹಾಗೂ ಶೀತಗಳು ಕಾಲದ ಸ್ಥಿತಿಯೊಂದಿಗೆ ಬದಲಾಗುತ್ತವೆ. ಗಾಳಿಯು ಕಂಪಿಸಿದಾಗ ಅದು ಶಾಖವನ್ನು ಉತ್ಪತ್ತಿ ಮಾಡುತ್ತದೆ ಎಂಬುದು ತಿಳಿದಿದೆ. ಹಾಗಾಗಿ ಗಾಳಿಯ ಚಲನೆ ಇಲ್ಲದೆ ಉಷ್ಣತೆಯೂ ಇಲ್ಲ. ಉಷ್ಣತೆ ಅಥವಾ ಶೀತ ಇಲ್ಲದೇ ಇಡೀ ಜಗತ್ತು ತನ್ನ ಅಸ್ತಿತ್ವನ್ನು ಕಳೆದುಕೊಳ್ಳುತ್ತದೆ.

ಕಾಲವನ್ನು ನಿಲ್ಲಿಸುವುದರಿಂದ ಎಲ್ಲಾ ಚಲನೆಯೂ ನಿಲ್ಲುತ್ತದೆ. ಪಂಚೇಂದ್ರಿಯಗಳ ಕಾರ್ಯ ನಿಂತುಹೋಗುತ್ತದೆ. ಹಾಗಾಗಿ ಮೆದುಳಿಗೆ ಸರಬರಾಜು ಆಗುವ ಸಂದೇಶ ನಿಲ್ಲುತ್ತದೆ. ದೇಹದಲ್ಲಿ ಏನಾಗುತ್ತದೆ ಎಂಬ ಮಾಹಿತಿ ಮೆದುಳಿಗೆ ತಲುಪುವುದೇ ಇಲ್ಲ. ಮಾಹಿತಿಯನ್ನು ಗ್ರಹಿಸಲು ಆಗುವುದೇ ಇಲ್ಲ. ಸಂದೇಶವಾಹಕ ಮತ್ತು ಕ್ರಿಯಾವಾಹಕ ನರಗಳ ಕಾರ್ಯ ಸ್ಥಗಿತಗೊಳ್ಳುತ್ತದೆ. ಕಾಲದ ನಿಲುಗಡೆಯಿಂದ ಗುರುತ್ವಾಕರ್ಷಣೆ ಮಾಯವಾಗುತ್ತದೆ. ಗುರುತ್ವಾಕರ್ಷಣೆ ಇಲ್ಲದೆ ನಮ್ಮ ದೇಹವೂ ಸ್ಥಿರವಾಗಿ ನಿಲ್ಲಲು ಸಾಧ್ಯವಾಗದು.

ಕಾಲವನ್ನು ನಿಲ್ಲಿಸಿದರೆ ಎಲ್ಲಾ ಮಾಧ್ಯಮಗಳ ಕೆಲಸ ಸ್ಥಗಿತವಾಗುತ್ತದೆ. ಟಿ.ವಿ. ನೋಡಲಾಗುವುದಿಲ್ಲ. ಚಾನೆಲ್ ಬದಲಿಸಲು ರಿಮೋಟ್ ಕಾರ್ಯನಿರ್ವಹಿಸುವುದೇ ಇಲ್ಲ. ಯಾವುದೇ ಕಾರ್ಯಕ್ರಮದ ಪ್ರಸಾರ ಸಂಪೂರ್ಣವಾಗಿ ನಿಂತು ಹೋಗುತ್ತದೆ. ಓದುವ ಹಾಗೂ ಬರೆಯುವ ಕಾರ್ಯ ಸಂಪೂರ್ಣವಾಗಿ ನಿಂತುಹೋಗುತ್ತದೆ. ಇನ್ನೊಬ್ಬರೊಂದಿಗೆ ಜಗಳ ಮಾಡಲು ಆಗುವುದಿಲ್ಲ. ಏಕೆಂದರೆ ಸಂಪೂರ್ಣವಾಗಿ ಮಾತು ನಿಂತು ಹೋಗಿರುವುದರಿಂದ ಯಾರು ಏನು ಹೇಳುತ್ತಿದ್ದಾರೆಂದು ತಿಳಿಯಲು ಆಗುವುದಿಲ್ಲ. ಅರ್ಥ ಅಥವಾ ಅಪಾರ್ಥ ಮಾಡಿಕೊಳ್ಳಲೂ ಆಗದು. ಇನ್ನೊಬ್ಬರ ಮೇಲೆ ಹಲ್ಲೆ ಮಾಡಲಾಗದು. ಹೀಗಾಗಿ ಅಪರಾಧಗಳು ಸಂಪೂರ್ಣವಾಗಿ ನಿಂತು ಹೋಗುತ್ತವೆ. ಕಾಲ ನಿಂತರೆ ಯಾವುದೇ ಅಂಗಗಳು ಚಲಿಸಲಾರವು. ಹಾಡಲು, ಆಡಲು ಆಗದು. ಕುಣಿಯಲು, ಕುಣಿಸಲು ಬಾರದು. ಪ್ರಯಾಣ ಸಂಪೂರ್ಣ ನಿಂತು ಹೋಗುತ್ತದೆ.

ಕಾಲವನ್ನು ನಿಲ್ಲಿಸುವುದರಿಂದ ವಿದ್ಯುತ್ಕಾಂತೀಯ ಬಲ, ಪರಮಾಣು ಶಕ್ತಿಗಳು ಸಹ ನಿಲ್ಲುತ್ತವೆ. ಇದರಿಂದ ಗುರುತ್ವಾಕರ್ಷಣೆ ಶಕ್ತಿ ಮಾಯವಾಗುತ್ತದೆ. ಕಾಲವನ್ನು ನಿಲ್ಲಿಸುವುದರಿಂದ ನಮ್ಮ ಭೂಗ್ರಹ ಸೂರ್ಯನನ್ನು ಸುತ್ತುವುದನ್ನು ನಿಲ್ಲಿಸುತ್ತದೆ. ಭೂಮಿಯು ಸೂರ್ಯನಿಂದ ಯಾವುದೇ ಗುರುತ್ವಾಕರ್ಷಣೆ ಅನುಭವಿಸುವುದಿಲ್ಲ. ಈ ಸ್ಥಿತಿಯಿಂದ ಭೂಮಿ ಸೌರವ್ಯೆಹದಲ್ಲಿ ತಾನಿರುವ ಸ್ಥಾನ ಕಳೆದುಕೊಳ್ಳುತ್ತದೆ. ಇದರಿಂದ ಅದು ಇತರ ಗ್ರಹ/ಆಕಾಶಕಾಯಗಳಿಗೆ ಢಿಕ್ಕಿ ಹೊಡೆಯಬಹುದು ಅಥವಾ ಅನ್ಯ ಗ್ರಹ/ಆಕಾಶಕಾಯಗಳು ಭೂಮಿಗೆ ಢಿಕ್ಕಿ ಹೊಡೆಯಬಹುದು. ಒಟ್ಟಾರೆ ಎರಡೂ ಸಂದರ್ಭಗಳಲ್ಲಿ ಭೂಮಿಗೆ ವಿನಾಶ ಉಂಟಾಗುತ್ತದೆ. ಕಾಲದ ನಿಲುಗಡೆಯಿಂದ ಬ್ರಹ್ಮಾಂಡದಲ್ಲಿನ ಎಲ್ಲಾ ಕಣಗಳು ಕುಸಿಯಲು ಪ್ರಾರಂಭವಾಗುತ್ತದೆ. ಆಗ ಕಾಣದ ಶಕ್ತಿಯೊಂದು ಎಲ್ಲವನ್ನೂ ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಇದೇ ಬ್ಲಾಕ್ ಹೋಲ್‌ನ ಸ್ಥಿತಿಯಲ್ಲವೇ? ಈ ಸನ್ನಿವೇಶಗಳು ಭಯಾನಕ ಎನಿಸಿದರೂ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಏಕೆಂದರೆ ಆಗ ನಮ್ಮ ಪಯಣ ಅನಂತದೆಡೆಗೆ ಸಾಗುತ್ತಿರುತ್ತದೆ. ಸೈದ್ಧಾಂತಿಕವಾಗಿ ಸಮಯವನ್ನು ನಿಲ್ಲಿಸುವುದು ಸಾಧ್ಯವಿಲ್ಲ. ಏಕೆಂದರೆ ಸಮಯವನ್ನು ನಿಲ್ಲಿಸುವುದೆಂದರೆ ಶೂನ್ಯಸಮಯ ಎಂದರ್ಥ. ಆಗ ಸಮಯ ಸಂಪೂರ್ಣವಾಗಿ ನಿಲುಗಡೆಯಾಗಿದೆ ಎಂದರ್ಥವಲ್ಲ. ಶೂನ್ಯ ಅಂದರೆ ಸೊನ್ನೆಯೂ ಒಂದು ಸಂಖ್ಯೆ ಆಗಿರುವುದರಿಂದ ಅದನ್ನು ಇನ್ನೂ ಚಿಕ್ಕ ಚಿಕ್ಕದಾಗಿ ವಿಭಾಗಿಸಬಹುದು. ಈಗಾಗಲೇ ನಾವೆಲ್ಲ ನ್ಯಾನೋ ಟೈಮ್ ಬಗ್ಗೆ ಕೇಳಿದ್ದೇವೆ. ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಸ್ಥಾಪಿತವಾಗುತ್ತಿರುವ ಕಾಲದ ಅಂಶವೆಂದರೆ ನ್ಯಾನೋ ಟೈಮ್. ಇಲ್ಲಿ ಶೂನ್ಯಕ್ಕಿಂತ ಕಡಿಮೆ ಅವಧಿಯ ಸಮಯವನ್ನು ಅಳೆಯಲಾಗುತ್ತದೆ. ಅಂದರೆ ಕಾಲವನ್ನು ನಿಲ್ಲಿಸಿದರೂ ಅದು ಸಂಪೂರ್ಣವಾಗಿ ನಿಂತಿರುವುದಿಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ. ನ್ಯಾನೋ ಕಾಲದಲ್ಲಿ ವಸ್ತುಗಳಲ್ಲಿನ ಅಣುಗಳೂ ನ್ಯಾನೋ ವೇಗದ ಚಲನೆಯಲ್ಲಿರುತ್ತವೆ. ನ್ಯಾನೋ ವೇಗವನ್ನು ಸಾಮಾನ್ಯ ಅಳತೆಗಳಿಂದ ನಿರ್ವಹಿಸಲಾಗದು.

ಕಾಲದ ನಿಲುಗಡೆ ಕುರಿತ ಇನ್ನೂ ಒಂದು ಸಿದ್ಧಾಂತದ ಬಗ್ಗೆ ಸಾಕಷ್ಟು ಅಧ್ಯಯನಗಳು ಈಗಾಗಲೇ ನಡೆದಿವೆ. ಕಪ್ಪುಕುಳಿಯ ಬಳಿ ಸಮಯವು ಶೂನ್ಯ ಅಥವಾ ನಿಲುಗಡೆ ಹೊಂದಿರುತ್ತದೆ ಎಂದು ವಿಜ್ಞಾನಿಗಳು ಭಾವಿಸುತ್ತಾರೆ. ಬಹುಶಃ ಕಪ್ಪುಕುಳಿಯು ತನ್ನ ಬಳಿ ಬಂದ ಎಲ್ಲವನ್ನೂ ತನ್ನೆಡೆಗೆ ಸೆಳೆದುಕೊಳ್ಳಲು ಕಾಲದ ಶೂನ್ಯತೆಯೇ ಕಾರಣ ಎನ್ನಲಾಗುತ್ತದೆ.

ಕಾಲವು ಬ್ರಹ್ಮಾಂಡದ ಅತ್ಯಂತ ಮೂಲಭೂತ ಶಕ್ತಿಯಾಗಿರುವುದರಿಂದ ಅದನ್ನು ನಿಲುಗಡೆ ಮಾಡುವ ಶಕ್ತಿ ಸದ್ಯಕ್ಕೆ ನಮಗಿಲ್ಲ. ಕಾಲವು ಹೇಗೆ ಕಾರ್ಯ ನಿರ್ವಹಿಸುತ್ತದೆ? ಅದು ಎಲ್ಲೆಲ್ಲಿ ಹೇಗೆ ಪಯಣಿಸುತ್ತದೆ? ಎಂಬುದನ್ನು ಗ್ರಹಿಸಬಹುದೇ ಹೊರತು ಅದನ್ನು ನಿಲ್ಲಿಸುವ ಶಕ್ತಿ ನಮಗಿಲ್ಲ. ಕಾಲವನ್ನು ನಿಲ್ಲಿಸುವ ಕುರಿತು ಮನಸ್ಸಿನ ವ್ಯಾಯಾಮಕ್ಕಾಗಿ ಒಂದಿಷ್ಟು ಆಲೋಚನೆಗಳನ್ನು ಮಾಡಬಹುದೇ ಹೊರತು ವಾಸ್ತವದಲ್ಲಿ ಇದು ಸಾಧ್ಯವಿಲ್ಲ. ಬೇಕಾದರೆ ನಮ್ಮ ಮನೆಯಲ್ಲಿನ ಕಾಲ ಸೂಚಕಗಳಾದ ಗಡಿಯಾರ ಮತ್ತು ವಾಚ್‌ಗಳನ್ನು ನಿಲ್ಲಿಸಬಹುದೇ ವಿನಹ ಬ್ರಹ್ಮಾಂಡದ ಕಾಲವನ್ನು ನಿಲ್ಲಿಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲ ನಮ್ಮ ಅಂತಿಮ ಕಾಲ(ಸಾವು)ದ ನಿರ್ಣಯವೂ ನಮ್ಮ ಕೈಯಲಿಲ್ಲ ಎಂದು ಹೇಳುತ್ತಾ ತಮ್ಮ ಭಾಷಣ ನಿಲ್ಲಿಸಿದರು.

share
ಆರ್. ಬಿ. ಗುರುಬಸವರಾಜ
ಆರ್. ಬಿ. ಗುರುಬಸವರಾಜ
Next Story
X