ಒಲಿಂಪಿಕ್ಸ್: ಸಾನಿಯಾ-ಅಂಕಿತಾ ರೈನಾ ಸವಾಲು ಅಂತ್ಯ
photo: twiiter/@India_AllSports
ಟೋಕಿಯೊ: ಸಾನಿಯಾ ಮಿರ್ಝಾ ಹಾಗೂ ಮೊದಲ ಬಾರಿ ಸ್ಪರ್ಧಿಸುತ್ತಿರುವ ಅಂಕಿತಾ ರೈನಾ ಟೋಕಿಯೊ ಒಲಿಂಪಿಕ್ಸ್ ನ ಮಹಿಳೆಯರ ಡಬಲ್ಸ್ ನ ಮೊದಲ ಸುತ್ತಿನಲ್ಲಿ ಸೋತು ಹೊರ ನಡೆದಿದ್ದಾರೆ.
ರವಿವಾರ ನಡೆದ ಪಂದ್ಯದಲ್ಲಿ ಹೆಚ್ಚಿನ ಸಮಯ ಪ್ರಾಬಲ್ಯ ಸಾಧಿಸಿದ ಸಾನಿಯಾ ಹಾಗೂ ಅಂಕಿತಾ ಜೋಡಿ ವಿರುದ್ಧ ಉಕ್ರೇನ್ ನ ಅವಳಿ ಸಹೋದರಿಯರಾದ ನಾಡಿಯಾ ಮತ್ತು ಲಿಯುಡ್ಮಿಲಾ ಕಿಚೆನೋಕ್ ಅವರು ಮೊದಲ ಸೆಟ್ ಸೋಲಿನಿಂದ ಬೇಗನೆ ಚೇತರಿಸಿಕೊಂಡು 0-6, 7-6(0), 10-8 ಸೆಟ್ ಗಳ ಅಂತರದಿಂದ ಜಯ ಸಾಧಿಸಿದರು.
Next Story