ವಾರಸುದಾರರ ಪತ್ತೆಗೆ ಮನವಿ
ಮಂಗಳೂರು, ಜು.25: ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಜು.22ರಂದು ಸುಮಾರು 60 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಜು.24ರಂದು ಮೃತಪಟ್ಟಿದ್ದಾರೆ.
ಸುಮಾರು 5.5 ಅಡಿ ಎತ್ತರ, ಕೃಷ ಶರೀರ, ಎಣ್ಣೆಗೆಂಪು ಮೈಬಣ್ಣ, ಉದ್ದ ಮೂಗು ಹೊಂದಿದ್ದು, ತಲೆಯಲ್ಲಿ ಸುಮಾರು 2 ಇಂಚು ಉದ್ದದ ಬಿಳಿ ಕೂದಲು ಇದೆ. ಗಡ್ಡ ಬಿಟ್ಟಿದ್ದಾರೆ. ಕೆಂಪು ಬಣ್ಣದ ಅಂಗಿ, ಬಿಳಿ, ಕೆಂಪು, ನೀಲಿ ಮಿಶ್ರಿತ ಲುಂಗಿ ಧರಿಸಿದ್ದಾರೆ. ವಾರಸುದಾರರು ಅಥವಾ ಮಾಹಿತಿ ಇದ್ದವರು ಮಂಗಳೂರು ರೈಲ್ವೆ ಪೊಲೀಸ್ ಠಾಣೆ (0824-2220559) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
Next Story





