ಮಂಗಳೂರು, ಜು.25: ಎನ್‌ಎಂಪಿಟಿಯ ಸಿಐಎಸ್‌ಎಫ್ ಘಟಕದಿಂದ ಎನ್‌ಎಂಪಿಟಿಯಲ್ಲಿ ಸಸಿ ನೆಡುವ ಕಾರ್ಯಕ್ರಮವು ರವಿವಾರ ಜರುಗಿತು.
ಸಿಐಎಸ್‌ಎಫ್ ಘಟಕದ ಡೆಪ್ಯುಟಿ ಕಮಾಂಡೆಂಟ್ ಆಶುತೋಷ್ ಗೌರ್, ಸಹಾಯಕ ಕಮಾಂಡೆಂಟ್ ಎಸ್.ಎನ್. ಚೌದರಿ ಸಹಿತ 77 ಸಿಬ್ಬಂದಿ ಉಪಸ್ಥಿತರಿದ್ದರು. ಸ್ಥಳೀಯ 20 ಕುಟುಂಬಗಳ 40 ನಾಗರಿಕರು ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.