ಬಾಕ್ಸಿಂಗ್ : ಪೂಜಾ ರಾಣಿ ಕ್ವಾರ್ಟರ್ ಫೈನಲ್ ಗೆ ಲಗ್ಗೆ

ಟೋಕಿಯೊ: ಭಾರತದ ಬಾಕ್ಸರ್ ಪೂಜಾ ರಾಣಿ 16 ನೇ ಸುತ್ತಿನಲ್ಲಿ ಪ್ರಾಬಲ್ಯ ಸಾಧಿಸಿದ್ದು, ಮಹಿಳಾ ಮಿಡ್ಲ್ ವೇಟ್ (69-75 ಕೆಜಿ) ವಿಭಾಗದಲ್ಲಿ ಅಲ್ಜೀರಿಯಾದ ಇಚ್ರಾಕ್ ಚೈಬ್ ಅವರನ್ನು 5-0 ಅಂತರದಿಂದ ಸೋಲಿಸಿದರು.
ರಾಣಿ ಕ್ವಾರ್ಟರ್ ಫೈನಲ್ ತಲುಪಿದ್ದು ಒಲಿಂಪಿಕ್ಸ್ ಪದಕ ಗೆಲ್ಲುವುದರಿಂದ ಒಂದು ಹೆಜ್ಜೆಯಿಂದ ಹಿಂದುಳಿದಿದ್ದಾರೆ.
ಮೊದಲ ಬಾರಿ ಒಲಿಂಪಿಕ್ಸ್ ನಲ್ಲಿ ಕಾಣಿಸಿಕೊಂಡಿರುವ ರಾಣಿ ಅವರು ಕ್ವಾರ್ಟರ್ ಫೈನಲ್ ತಲುಪಿರುವ ಭಾರತದ ಎರಡನೇ ಮಹಿಳಾ ಬಾಕ್ಸರ್ ಎನಿಸಿಕೊಂಡರು. ಮಂಗಳವಾರ ಲವ್ಲೀನಾ ಬೊರ್ಗೊಹೈನ್ ಕ್ವಾರ್ಟರ್ ಫೈನಲ್ ತಲುಪಿದ್ದರು.
Next Story