ಕೃನಾಲ್ ಪಾಂಡ್ಯ ಕೋವಿಡ್ ಪಾಸಿಟಿವ್: ಜೊತೆಗಿದ್ದ 8 ಪ್ರಮುಖ ಆಟಗಾರರು ಸಂಪೂರ್ಣ ಸರಣಿಗೆ ಅಲಭ್ಯ

photo: twitter
ಕೊಲಂಬೊ: ಕೋವಿಡ್ ಸೋಂಕಿಗೆ ಒಳಗಾಗಿರುವ ಕ್ರಿಕೆಟಿಗ ಕೃನಾಲ್ ಪಾಂಡ್ಯ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಭಾರತೀಯ ಕ್ರಿಕೆಟ್ ತಂಡದ ಎಂಟು ಪ್ರಮುಖ ಆಟಗಾರರು ಇಡೀ ಟಿ-20 ಸರಣಿಗೆ ಲಭ್ಯವಿರುವುದಿಲ್ಲ. ಈ ಎಂಟು ಆಟಗಾರರಲ್ಲಿ ನಾಯಕ ಶಿಖರ್ ಧವನ್ ಕೂಡ ಇದ್ದಾರೆ ಎಂದು ವರದಿಯಾಗಿದೆ.
'ಸ್ಪೋರ್ಟ್ಸ್ ತಕ್' ಪ್ರಕಾರ, ಈ ಆಟಗಾರರನ್ನು ಪ್ರತ್ಯೇಕವಾಗಿರಿಸಲಾಗುವುದು ಹಾಗೂ ಉಳಿದ ಸರಣಿಗಳಿಗೆ ಲಭ್ಯವಿರುವುದಿಲ್ಲ ಅಂದರೆ ಹೊಸ ಆಡುವ 11ರ ಬಳಗವನ್ನು ರೂಪಿಸಲು ತಂಡದ ಆಡಳಿತವು ಲಭ್ಯವಿರುವ ಆಯ್ಕೆಯ ಮೊರೆ ಹೋಗಬೇಕಾಗುತ್ತದೆ. ಶ್ರೀಲಂಕಾ ವಿರುದ್ಧ ಟ್ವೆಂಟಿ-20 ಸರಣಿಯಲ್ಲಿ ಸದ್ಯ ಭಾರತ 1-0 ಮುನ್ನಡೆಯಲ್ಲಿದೆ. ಆದರೆ ‘ನಿಕಟ ಸಂಪರ್ಕ’ ವಿಭಾಗದಲ್ಲಿರುವ ಆಟಗಾರರ ಪಟ್ಟಿ ಕಳವಳವನ್ನು ಉಂಟುಮಾಡುತ್ತದೆ. ಆ ಹೆಸರುಗಳು ಇಲ್ಲಿವೆ: ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಕೃಷ್ಣಪ್ಪ ಗೌತಮ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಯಜ್ವೇಂದ್ರ ಚಹಾಲ್ ಹಾಗೂ ಶಿಖರ್ ಧವನ್.
ಸಂಪೂರ್ಣ ತಂಡ ಕೋರೊನ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಪಡೆದಿದ್ದು ಕೃನಾಲ್ ಪಾಂಡ್ಯ ಪ್ರತ್ಯೇಕ ಹೋಟೆಲ್ ಗೆ ತೆರಳಿದ್ದಾರೆ.
ಕೃನಾಲ್ ಸಂಪರ್ಕ ಪಟ್ಟಿಯಲ್ಲಿ ಪೃಥ್ವಿ ಶಾ ಹಾಗೂ ಸೂರ್ಯಕುಮಾರ್ ಯಾದವ್ ಅವರ ಹೆಸರೂ ಇದೆ. ಇವರಿಬ್ಬರನ್ನು ಮೀಸಲು ಆಟಗಾರರಾಗಿ ಇಂಗ್ಲೆಂಡ್ಗೆ ಕಳುಹಿಸುವ ಬಿಸಿಸಿಐ ಯೋಜನೆಯ ಮೇಲೆ ಈ ಬೆಳವಣಿಗೆ ಪರಿಣಾಮಬೀರಬಹುದು.