ಫೆಲೆಸ್ತೀನೀಯರಿಗೆ ಇನ್ನೂ 16,000 ಉದ್ಯೋಗ ಪರ್ಮಿಟ್: ಇಸ್ರೇಲ್

ಜೆರುಸಲೇಮ್, ಜು. 28: ಇಸ್ರೇಲ್ ನ ಕಟ್ಟಡ ನಿರ್ಮಾಣ ಮತ್ತು ಹೊಟೇಲ್ ಉದ್ಯಮಗಳಲ್ಲಿ ಕೆಲಸ ಮಾಡಲು ಆಕ್ರಮಿತ ಪಶ್ಚಿಮ ದಂಡೆಯ ಇನ್ನೂ 16,000 ಫೆಲೆಸ್ತೀನೀಯರಿಗೆ ಉದ್ಯೋಗ ಪರ್ಮಿಟ್ ಗಳನ್ನು ನೀಡಲಾಗುವುದು ಎಂದು ಇಸ್ರೇಲ್ ಬುಧವಾರ ಪ್ರಕಟಿಸಿದೆ. ಇದರೊಂದಿಗೆ ಫೆಲೆಸ್ತೀನೀಯರಿಗೆ ನೀಡುವ ಉದ್ಯೋಗ ಪರ್ಮಿಟ್ಗಳ ಸಂಖ್ಯೆ ಒಂದು ಲಕ್ಷವನ್ನು ದಾಟಲಿದೆ.
‘‘ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಜೂಡಿಯ ಮತ್ತು ಸಮರಿಯ (ದಕ್ಷಿಣ ಮತ್ತು ಉತ್ತರ ಪಶ್ಚಿಮ ದಂಡೆ) ಪಟ್ಟಣಗಳ ಫೆಲೆಸ್ತೀನೀಯರ ಕೋಟವನ್ನು ಇನ್ನೂ 15,000ದಷ್ಟು ಹೆಚ್ಚಿಸಲು ಇಸ್ರೇಲ್ ಉದ್ದೇಶಿಸಿದೆ’’ ಎಂದು ಆಕ್ರಮಿತ ಫೆಲೆಸ್ತೀನ್ ಪ್ರದೇಶಗಳಲ್ಲಿ ನಾಗರಿಕ ವ್ಯವಹಾರಗಳನ್ನು ನೋಡಿಕೊಳ್ಳುವ ಇಸ್ರೇಲ್ ಸೇನೆಯ ಘಟಕವಾಗಿರುವ ಸಿಒಜಿಎಟಿ ಹೇಳಿದೆ.
ಇಸ್ರೇಲ್‌ನ ಹೊಟೇಲ್ ಗಳಲ್ಲಿ ಕೆಲಸ ಮಾಡುವ ಫೆಲೆಸ್ತೀನೀಯರಿಗೆ ಇನ್ನೂ 1,000 ಪರ್ಮಿಟ್ ಗಳನ್ನು ನೀಡಲಾಗುವುದು ಎಂದು ಅದು ತಿಳಿಸಿದೆ.
Next Story