ಡಿ.ವನಿತಾಗೆ ಪಿಎಚ್ ಡಿ

ಮಂಗಳೂರು, ಜು. 28: ಹಾಸನ ನಗರದ ಎವಿಕೆ ಕಾಲೇಜು ಹಾಗೂ ಸರಕಾರಿ ಕಲಾ ವಾಣಿಜ್ಯ ಹಾಗೂ ಸ್ನಾತಕೋತ್ತರ ಸಮಾಜ ಶಾಸ್ತ್ರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕಿ ಡಿ.ವನಿತಾ ಅವರು ಸಿದ್ಧಪಡಿಸಿದ ' ಎ ಚೇಂಜಿಂಗ್ ಸ್ಟೇಟಸ್ ಆಫ್ ಬಂಟ್ ವುಮೆನ್ ವಿದ್ ಸ್ಪೆಷಲ್ ರೆಫರೆನ್ಸ್ ಟು ದಕ್ಷಿಣ ಕನ್ನಡ ' ಎಂಬ ವಿಷಯದ ಸಂಶೋಧನಾ ಮಹಾ ಪ್ರಬಂಧಕ್ಕೆ ಕುಪ್ಟಂನ ದ್ರಾವಿಡ ವಿವಿ ಪಿಎಚ್ ಡಿ ಪದವಿ ನೀಡಿದೆ.
ಬಂಟ್ವಾಳ ವಾಮದಪದವಿನ ದಪ್ಪರಬೈಲ್ ಕೆ.ವೆಂಕಪ್ಪ ಶೆಟ್ಟಿ ಅವರ ಪುತ್ರಿಯಾಗಿರುವ ವನಿತಾ ಅವರು ಉಡುಪಿಯ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕ ಡಾ.ದುಗ್ಗಪ್ಪ ಕಜೆಕಾರ್ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧವನ್ನು ಸಿದ್ಧಪಡಿಸಿದ್ದರು.
Next Story





