Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನೂತನ ಮುಖ್ಯಮಂತ್ರಿಯ ಮುಂದಿರುವ...

ನೂತನ ಮುಖ್ಯಮಂತ್ರಿಯ ಮುಂದಿರುವ ಸವಾಲುಗಳು!

ವಾರ್ತಾಭಾರತಿವಾರ್ತಾಭಾರತಿ29 July 2021 12:05 AM IST
share
ನೂತನ ಮುಖ್ಯಮಂತ್ರಿಯ ಮುಂದಿರುವ ಸವಾಲುಗಳು!

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಬಸವರಾಜ ಬೊಮ್ಮಾಯಿಯವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಮೂಲಕ ಕೇಂದ್ರ ವರಿಷ್ಠರು, ನಯ, ನಾಜೂಕಿನ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ಲಿಂಗಾಯತ ಕೇಂದ್ರಿತ ರಾಜಕೀಯ ಶಕ್ತಿ ಕೇಂದ್ರದಿಂದ ಚುಕ್ಕಾಣಿಯನ್ನು ಏಕಾಏಕಿ ಕಿತ್ತುಕೊಳ್ಳುವ ತನ್ನ ಪ್ರಯತ್ನದಿಂದ ನಾಗಪರು ಮಠ ಎರಡು ಹೆಜ್ಜೆಯಷ್ಟು ಹಿಂದೆ ಸರಿದಿದೆ. ಆದರೆ ತನ್ನ ಈ ಮೊದಲ ಪ್ರಯತ್ನದಲ್ಲಿ ಅದು ಭಾಗಶಃ ಯಶಸ್ವಿಯಾಗಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ ಮತ್ತು ಲಿಂಗಾಯತ ಲಾಬಿ ನೆಲದಾಳದಲ್ಲಿ ಹರಡಿಕೊಂಡ ಬೇರಿನ ಆಳ ಅರಿವಾಗುತ್ತಿದ್ದಂತೆಯೇ, ಅದು ಬುಡಕೀಳುವ ಪ್ರಯತ್ನದಿಂದ ಹಿಂದೆ ಸರಿದು, ಕಾಂಡವನ್ನಷ್ಟೇ ಮೃದುವಾಗಿ ಸವರಿ ಹಾಕಿದೆ. ಇನ್ನೂ ಸಣ್ಣ ಚಿಗುರೊಂದು ಉಳಿದುಕೊಂಡಿದೆ ಎನ್ನುವ ನೆಮ್ಮದಿಯಿಂದ, ಸಂಘಪರಿವಾರಕ್ಕೆ ಹಿನ್ನಡೆ, ಯಡಿಯೂರಪ್ಪರಿಗೆ ಮಣಿದ ಕೇಂದ್ರ ವರಿಷ್ಠರು ಎಂದು ಈ ಬೆಳವಣಿಗೆಗಳನ್ನು ವಿಶ್ಲೇಷಿಸಲಾಗುತ್ತಿದೆ. ಆಪರೇಷನ್ ಕಮಲದ ಮೂಲಕ ಬಹುಮತವಿಲ್ಲದೆ ರಚನೆಯಾಗಿರುವ ಸರಕಾರ ಇದಾಗಿರುವುದರಿಂದ, ಮುಂದಿನ ಎರಡು ವರ್ಷಗಳನ್ನು ಆರೆಸ್ಸೆಸ್ ಮತ್ತು ಕೇಂದ್ರ ವರಿಷ್ಠರು ಪಕ್ಷದ ಮೇಲೆ ಕೆಲವು ಪ್ರಯೋಗಗಳಿಗಾಗಿ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.

ಸಣ್ಣ ಸಣ್ಣ ಹೆಜ್ಜೆಗಳನ್ನಿಟ್ಟು ಅದರ ಪರಿಣಾಮಗಳನ್ನು ಮನಗಂಡು, ಮುಂದೆ ಅದು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಮುಂಬರುವ ವಿಧಾನಸಭಾ ಚುನಾವಣೆಯ ಹೊತ್ತಿಗೆ ಆ ನಿರ್ಧಾರ ಸ್ಪಷ್ಟವಾಗಿ ಪ್ರಕಟಗೊಳ್ಳಲಿದೆ. ಸದ್ಯಕ್ಕೆ ಬಿಜೆಪಿಯೊಳಗಿರುವ ಮುಖಗಳಿಗೆ ಹೋಲಿಸಿದರೆ ರಾಜ್ಯದ ಪಾಲಿಗೆ ಬಸವರಾಜ ಬೊಮ್ಮಾಯಿ ಆಯ್ಕೆ ಅತ್ಯುತ್ತಮವಾಗಿದೆ. ಜೊತೆಗೆ ಬಿಜೆಪಿಯ ಪಾಲಿಗೂ. ಕೇಂದ್ರ ವರಿಷ್ಠರಿಂದ ಈ ಆಯ್ಕೆ ಬಿಜೆಪಿಯೊಳಗಿರುವ ಹಿಂದುತ್ವದ ಕಟ್ಟರ್ ಪಂಥೀಯರಿಗೆ ಅನಿರೀಕ್ಷಿತವಾಗಿತ್ತು. ಸಿದ್ದರಾಮಯ್ಯರಂತಹ ನಾಯಕರೊಂದಿಗೆ ಜೊತೆಗಿದ್ದು ಕೆಲಸ ಮಾಡಿದ ಇತಿಹಾಸವಿರುವ, ಆರೆಸ್ಸೆಸ್‌ನೊಂದಿಗೆ ಆಳವಾಗಿ ಗುರುತಿಸಿಕೊಳ್ಳದ, ಎಲ್ಲಕ್ಕಿಂತ ಮುಖ್ಯವಾಗಿ ಯಡಿಯೂರಪ್ಪ ಅವರ ಒಡನಾಡಿಯಾಗಿರುವ ಬೊಮ್ಮಾಯಿಯ ಆಯ್ಕೆಯ ಮೂಲಕ, ಮುಂಬರುವ ಬರೇ ಎರಡು ವರ್ಷಗಳ ಅವಧಿಗಾಗಿ ರಾಜ್ಯ ಬಿಜೆಪಿಯನ್ನು ಆಪತ್ತಿಗೆ ತಳ್ಳುವ ಸಾಹಸಕ್ಕೆ ಬಿಜೆಪಿ ವರಿಷ್ಠರು ಇಳಿಯಲಿಲ್ಲ. ಬಿಜೆಪಿಯ ಪಾಲಿಗೆ ಇದೊಂದು ಮುತ್ಸದ್ದಿತನದ ತೀರ್ಮಾನವಾಗಿದೆ.

ಬಸವರಾಜ ಬೊಮ್ಮಾಯಿಯವರಿಗೂ ಇದು ಅನಿರೀಕ್ಷಿತವಾಗಿರುವುದರಿಂದ ‘ಸಿಕ್ಕಿದ್ದು ಸೀರುಂಡೆ’ ಎಂದು ಅವರು ಧಾರಾಳವಾಗಿ ಖುಷಿ ಪಡಬಹುದು. ಈ ಹಿಂದೆ 1988ರಲ್ಲಿ ಎಸ್. ಆರ್. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದೂ ಅನಿರೀಕ್ಷಿತವಾಗಿ. ಹಾಗೆಯೇ ಅವರು ಮುಖ್ಯಮಂತ್ರಿಯಾಗಿ ಮುಂದುವರಿದಿದ್ದು ಕೇವಲ ಎಂಟು ತಿಂಗಳು ಮಾತ್ರ. ಅನಿರೀಕ್ಷಿತವಾಗಿ ಒದಗುವ ಅಧಿಕಾರ, ಅಂತಹದೇ ಒಂದು ಅನಿರೀಕ್ಷಿತ ಘಳಿಗೆಯಲ್ಲಿ ಕೈಯಿಂದ ಜಾರಿಹೋಗುತ್ತದೆ ಎನ್ನು ವ ಪಾಠವನ್ನು ತನ್ನ ತಂದೆಯ ಮೂಲಕ ಬಸವರಾಜ ಬೊಮ್ಮಾಯಿಯವರು ನೆನಪಲ್ಲಿಟ್ಟುಕೊಂಡಿದ್ದಾರೆ ಎಂದಾಗಿದ್ದರೆ, ಅವರು ಭವಿಷ್ಯದಲ್ಲಿ ಭ್ರಮನಿರಸನಕ್ಕೊಳಗಾಗುವುದು ತಪ್ಪುತ್ತದೆ. ಬಹುಶಃ ಬಿಜೆಪಿಯೊಳಗಿರುವ ಸದ್ಯದ ವಾತಾವರಣದಲ್ಲಿ ಅವರೂ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿರಲಿಕ್ಕಿಲ್ಲ ಎಂದೇ ಭಾವಿಸೋಣ. ಯಡಿಯೂರಪ್ಪ ಅವರು ಪೂರ್ಣ ಪ್ರಮಾಣದಲ್ಲಿ ಭ್ರಷ್ಟಾಚಾರಿಗಳಾಗಿದ್ದುದರಿಂದ, ಈಗ ನೂತನ ಮುಖ್ಯಮಂತ್ರಿಯ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ ಆಡಳಿತ ಸರಿಯಾದ ಮಾರ್ಗದಲ್ಲಿ ಮುಂದುವರಿಯುತ್ತದೆ ಎಂದು ನಿರೀಕ್ಷಿಸುವಂತಿಲ್ಲ. ಯಾಕೆಂದರೆ, ಒಬ್ಬ ಮುಖ್ಯಮಂತ್ರಿಯನ್ನು ಬದಲಾಯಿಸುವುದರಿಂದಷ್ಟೇ ಸರಕಾರದ ನೀತಿ ಬದಲಾಗುವುದಿಲ್ಲ. ರಾಜ್ಯದ ಕುರಿತಂತೆ ಕೇಂದ್ರ ತನ್ನ ಧೋರಣೆಯನ್ನು ಮುಂದುವರಿಸಿದರೆ, ನೂತನ ಮುಖ್ಯಮಂತ್ರಿಯೂ ಅಸಹಾಯಕರಾಗಬೇಕಾಗುತ್ತದೆ. ದೊಡ್ಡ ಮೊತ್ತದ ರಾಜ್ಯದ ಜಿಎಸ್‌ಟಿ ಪರಿಹಾರ ಧನವನ್ನು ನೀಡದೆ ಕೇಂದ್ರ ಸರಕಾರ ಸತಾಯಿಸುತ್ತಿದೆ. ರಾಜ್ಯ ನೆರೆಯಿಂದ ಕಂಗೆಟ್ಟಾಗಲೂ ಕೇಂದ್ರ ಸರಕಾರ ಸ್ಪಂದಿಸಿರಲಿಲ್ಲ. ಪರಿಹಾರಕ್ಕಾಗಿ ಎರಡೆರಡು ಬಾರಿ ದಿಲ್ಲಿಗೆ ಧಾವಿಸಿದ ಯಡಿಯೂರಪ್ಪ, ಬರಿಗೈಯಲ್ಲಿ ವಾಪಸಾಗಿದ್ದರು.

ವಿಪರ್ಯಾಸವೆಂದರೆ, ಹಲವು ತಿಂಗಳ ಕಾಲ ಸಚಿವ ಸಂಪುಟ ವಿಸ್ತರಣೆಗೂ ಅನುಮತಿ ನೀಡದೆ ಯಡಿಯೂರಪ್ಪರನ್ನು ಸತಾಯಿಸಿದರು. ಕನಿಷ್ಠ, ರಾಜ್ಯದ ಸಹೋದ್ಯೋಗಿಗಳು ಮುಖ್ಯಮಂತ್ರಿಯ ಜೊತೆಗೆ ಸಹಕರಿಸಿದ್ದರೂ ಆಡಳಿತ ಸುಗಮವಾಗುತ್ತಿತ್ತು. ಆದರೆ ಸಹಕರಿಸಲಿಲ್ಲ ಮಾತ್ರವಲ್ಲ, ಸಂಸದರು ಬಹಿರಂಗವಾಗಿಯೇ ‘ರಾಜ್ಯಕ್ಕೆ ಪರಿಹಾರದ ಅಗತ್ಯವೇ ಇಲ್ಲ. ರಾಜ್ಯಕ್ಕೆ ಬೇಕಾಗುವ ಹಣ ಖಜಾನೆಯಲ್ಲಿದೆ’ ಎಂಬ ಹೇಳಿಕೆಯನ್ನು ನೀಡಿ ಮುಖ್ಯಮಂತ್ರಿಗೆ ಮುಜುಗರವನ್ನು ಸೃಷ್ಟಿಸಿದರು. ದಿಲ್ಲಿಯಲ್ಲಿರುವ ರಾಜ್ಯದ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರ ವಿರುದ್ಧ ಸಂಚು ಮಾಡುವುದರಲ್ಲೇ ಕಾಲ ಕಳೆದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿರುವ ಈ ಸಂದರ್ಭದಲ್ಲಿ, ಕೇಂದ್ರ ಸರಕಾರ ಮತ್ತು ಬಿಜೆಪಿಯೊಳಗಿರುವ ನಾಯಕರ ವರ್ತನೆಗಳಲ್ಲಿ ಬದಲಾವಣೆಯಾದರೆ ಮಾತ್ರ ಸರಕಾರದೊಳಗೂ ಬದಲಾವಣೆಯಾಗಲು ಸಾಧ್ಯ. ಎಲ್ಲಿಯವರೆಗೆ ಬಿಜೆಪಿಯ ಸಂಸದರು ಕರ್ನಾಟಕದ ಹಿತಾಸಕ್ತಿಯನ್ನು ಬಲಿಕೊಟ್ಟು ವರಿಷ್ಠರ ಭಜನೆಯಲ್ಲಿ ಮೈಮರೆತಿರುತ್ತಾರೆಯೋ ಅಲ್ಲಿಯವರೆಗೆ ಕರ್ನಾಟಕದಲ್ಲಿ ಯಾವ ಸುಧಾರಣೆಯೂ ಕಾಣಲು ಸಾಧ್ಯವಿಲ್ಲ. ಬಸವರಾಜ ಬೊಮ್ಮಾಯಿ ಅವರ ಆಯ್ಕೆಯಿಂದಾಗಿ ಬಿಜೆಪಿಯೊಳಗಿರುವ ಭಿನ್ನಮತ ತಣ್ಣಗಾಯಿತು ಎಂದು ಭಾವಿಸುವುದು ಇನ್ನೊಂದು ಪೆದ್ದುತನವಾಗುತ್ತದೆ.

ಯಡಿಯೂರಪ್ಪರ ಮೇಲೆ ವೈಯಕ್ತಿಕವಾಗಿ ಅಸಮಾಧಾನಹೊಂದಿದವರಿಗೆ ಅವರನ್ನು ಇಳಿಸಿದ ‘ಸಮಾಧಾನ’ವೊಂದು ದಕ್ಕಿರಬಹುದು. ಆದರೆ ಅವರ ಅತೃಪ್ತಿಯ ಮೂಲ ಕಾರಣ ಹೊಸ ಆಯ್ಕೆಯಿಂದ ಪರಿಹಾರವಾಗಿಲ್ಲ. ಹಿರಿಯ ನಾಯಕ ಜಗದೀಶ್ ಶೆಟ್ಟರ್ ‘ಹೊಸ ಸಂಪುಟಕ್ಕೆ ಸೇರ್ಪಡೆಯಾಗುವುದಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ. ‘ನನ್ನನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ಕುರುಬ ಸ್ವಾಮೀಜಿಗಳು ಆಗ್ರಹಿಸಿದ್ದಾರೆ’ ಎಂಬ ಹೇಳಿಕೆಯನ್ನು ಈಶ್ವರಪ್ಪ ನೀಡಿದ್ದಾರೆ. ಯತ್ನಾಳ್, ಕತ್ತಿ ಮೊದಲಾದವರೆಲ್ಲ ಇನ್ನೂ ಮಸೆಯುತ್ತಲೇ ಇದ್ದಾರೆ. ಯಡಿಯೂರಪ್ಪ ಬಣದೊಳಗಿರುವ ಬಣದ ಅಸಮಾಧಾನ ಕುದಿಯುತ್ತಲೇ ಇದೆ. ಸರಕಾರ ರಚನೆಗೆ ಕಾರಣರಾಗಿದ್ದ ವಲಸೆ ಸಚಿವರನ್ನು ಸಮಾಧಾನಿಸಬೇಕಾದ ಹೊಣೆಗಾರಿಕೆಯೂ ಬೊಮ್ಮಾಯಿ ಅವರ ಮೇಲಿದೆ.

ಇವರೆಲ್ಲದರ ಜೊತೆಗೆ ಆರೆಸ್ಸೆಸ್ ಹಿನ್ನೆಲೆಯಿರುವ ನಾಯಕರ ವೌನವನ್ನೂ ಹಲವು ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಯಡಿಯೂರಪ್ಪ ಅವರ ಮಾರ್ಗದರ್ಶನದಂತೆ ಆಡಳಿತ ನೀಡುತ್ತೇನೆ ಎಂದು ಬೊಮ್ಮಾಯಿ ಹೇಳಿಕೆ ನೀಡಿದ್ದರೂ, ಅದು ಅಷ್ಟು ಸುಲಭವಿಲ್ಲ ಎನ್ನುವುದು ಅವರಿಗೆ ಗೊತ್ತಿಲ್ಲದೇ ಇರುವ ವಿಷಯವಲ್ಲ. ಸರಕಾರದೊಳಗೆ ಯಡಿಯೂರಪ್ಪ ಹಸ್ತಕ್ಷೇಪ ಮಾಡಿದ್ದೇ ಆದಲ್ಲಿ, ಮತ್ತೆ ಭಿನ್ನಮತ ಸ್ಫೋಟಗೊಳ್ಳಲಿದೆ. ಹಾಗೆಯೇ ಯಡಿಯೂರಪ್ಪ ಅಥವಾ ಅವರ ಪುತ್ರನನ್ನು ಸಂಪೂರ್ಣ ದೂರ ಇಟ್ಟು ಆಡಳಿತ ನಡೆಸಲು ಮುಂದಾದರೆ, ಯಡಿಯೂರಪ್ಪ ಪರವಾಗಿ ಹೊಸ ಬಣವೊಂದು ಸೃಷ್ಟಿಯಾಗಲಿದೆ. ಅದನ್ನು ಸೃಷ್ಟಿ ಮಾಡುವಷ್ಟು ಹಣ ಸಂಗ್ರಹ, ಈಗಾಗಲೇ ಯಡಿಯೂರಪ್ಪ ಅವರ ಪುತ್ರನ ಬಳಿಯಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಅತೃಪ್ತರನ್ನು ಬಳಸಿಕೊಂಡು ಆರೆಸ್ಸೆಸ್ ತನ್ನ ಆಟವನ್ನು ಮುಂದುವರಿಸಲಿದೆ.

ಸರಕಾರದಲ್ಲಿ ಇನ್ನಷ್ಟು ಗೊಂದಲಗಳನ್ನು ಸೃಷ್ಟಿಸಿ, ಸಂಪೂರ್ಣ ಬದಲಾವಣೆ ಬಿಜೆಪಿಗೆ ಅನಿವಾರ್ಯ ಎನ್ನುವುದನ್ನು ಮಾಧ್ಯಮಗಳ ಮೂಲಕ ಜನರಲ್ಲಿ ಬಿತ್ತಲಿದೆ ಮತ್ತು ಆ ಬದಲಾವಣೆಯ ಹೆಸರೇ ‘ಜೋಶಿ, ಸಂತೋಷ್, ಸೂರ್ಯ...’ ಇತ್ಯಾದಿಗಳು. ಈ ಎಲ್ಲ ಸಂಚುಗಳನ್ನು ಮೀರಿ, ಕರ್ನಾಟಕಕ್ಕೆ ಬೊಮ್ಮಾಯಿಯವರಿಂದ ಉತ್ತಮ ಆಡಳಿತ ನೀಡಲು ಸಾಧ್ಯವಾದರೆ ಅದು ಬಹುದೊಡ್ಡ ಸಾಧನೆಯೇ ಸರಿ. ಕೊರೋನ, ಲಾಕ್‌ಡೌನ್, ನೆರೆ ಇತ್ಯಾದಿಗಳಿಂದ ತತ್ತರಿಸಿ ಕೂತಿರುವ ಕರ್ನಾಟಕಕ್ಕೆ ಉತ್ತಮ ಆಡಳಿತ ನೀಡಲು ಬೊಮ್ಮಾಯಿ ಅವರಿಗೆ ಸಹಕರಿಸುವುದು ಕೇಂದ್ರ ವರಿಷ್ಠರು ಮತ್ತು ಆರೆಸ್ಸೆಸ್ ನಾಯಕರ ಕರ್ತವ್ಯವಾಗಿದೆ. ಮುಂದಿನ ಎರಡು ವರ್ಷಗಳ ಒಳಗೆ ಇನ್ನೂ ಒಂದು ಮುಖ್ಯಮಂತ್ರಿ ಬದಲಾವಣೆ ಪ್ರಹಸನವನ್ನು ತಾಳಿಕೊಳ್ಳುವ ಶಕ್ತಿ ಕರ್ನಾಟಕಕ್ಕಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X