ಒಲಿಂಪಿಕ್ಸ್ : ಬಾಕ್ಸರ್ ಸತೀಶ್ ಕುಮಾರ್ ಅಂತಿಮ-8ರ ಸುತ್ತಿಗೆ ತೇರ್ಗಡೆ

photo: AP
ಟೋಕಿಯೊ: ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಮೊದಲ ಸೂಪರ್ ಹೇವಿ ವೇಟ್ (+91ಕೆಜಿ) ಬಾಕ್ಸಿಂಗ್ ಪಟು ಸತೀಶ್ ಕುಮಾರ್ ಅಂತಿಮ-8ರ ಸುತ್ತು ತಲುಪಿದ್ದಾರೆ.
ಗುರುವಾರ ನಡೆದ ಮೊದಲ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸತೀಶ್ ಅವರು ಜಮೈಕಾದ ರಿಕಾರ್ಡೊ ಬ್ರೌನ್ ಅವರನ್ನು 4-1 ಅಂತರದಿಂದ ಮಣಿಸಿದರು.
32ರ ಹರೆಯದ ಸತೀಶ್ ಕುಮಾರ್ ಮುಂದಿನ ಸುತ್ತಿನಲ್ಲಿ ಉಜ್ಬೇಕಿಸ್ತಾನದ ಹಾಲಿ ವಿಶ್ವ ಹಾಗೂ ಏಶ್ಯನ್ ಚಾಂಪಿಯನ್ ಬಖೋದಿರ್ ಜಲೊಲೊವ್ ಅವರ ಸವಾಲನ್ನು ಎದುರಿಸಲಿದ್ದಾರೆ.
ಎರಡು ಬಾರಿ ಏಶ್ಯನ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ವಿಜೇತ ಸತೀಶ್ ಹಲವು ಬಾರಿ ರಾಷ್ಟ್ರಮಟ್ಟದ ಚಾಂಪಿಯನ್ ಶಿಪ್ ಜಯಿಸಿದ್ದರು.
Next Story