ಒಲಿಂಪಿಕ್ಸ್: ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗರಿಸಿದ ಮೇರಿ ಕೋಮ್

ಟೋಕಿಯೊ: ಭಾರತದ ಹಿರಿಯ ಬಾಕ್ಸರ್ ಮೇರಿ ಕೋಮ್ ಟೋಕಿಯೊ ಒಲಿಂಪಿಕ್ ಗೇಮ್ಸ್ ನ 16 ನೇ ಸುತ್ತಿನ ಪಂದ್ಯದಲ್ಲಿ ಮುಗ್ಗರಿಸಿದ್ದಾರೆ.
ಗುರುವಾರ ನಡೆದ ಮಹಿಳೆಯರ ಫ್ಲೈ ವೇಟ್ 51 ಕೆಜಿ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಮೇರಿ ಕೋಮ್ ಅವರು ಕೊಲಂಬಿಯಾದ ಇಂಗ್ರಿಟ್ ವೆಲೆನ್ಸಿಯಾ ವಿರುದ್ಧ 2-3 ಅಂತರದಿಂದ ಶರಣಾದರು. ಈ ಮೂಲಕ ಕ್ರೀಡಾಕೂಟದಿಂದ ಹೊರಗುಳಿದಿದ್ದಾರೆ.
ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಮೂರನೇ ಹಾಗೂ ಅಂತಿಮ ರೌಂಡನ್ನು ಗೆದ್ದುಕೊಂಡರು. ಆದರೆ ಮೊದಲ ರೌಂಡ್ ನಲ್ಲಿನ 1-4 ಅಂತರದ ಸೋಲು ಅವರಿಗೆ ದುಬಾರಿಯಾಯಿತು.
Next Story