ಪರವಾನಿಗೆ ರಹಿತ ಕೆಎಸ್ಸಾರ್ಟಿಸಿ ಬಸ್ ಮುಟ್ಟುಗೋಲು
ಉಡುಪಿ, ಜು.29: ಪ್ರಯಾಣಿಕರ ಮಜಲು ವಾಹನಗಳು ಪರವಾನಿಗೆ ರಹಿತವಾಗಿ ಹಾಗೂ ರಹದಾರಿ ನಿಯಮ ಉಲ್ಲಂಘನೆ ಮಾಡಿ ಸಂಚರಿಸಿದರೆ ಅಂಥ ಬಸ್ಸುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದೆಂದು ಈಗಾಗಲೇ ಮುನ್ನೆಚ್ಚರಿಕೆ ನೀಡಲಾಗಿದ್ದರೂ ಸಹ, ಕಾನೂನು ಉಲ್ಲಂಘನೆ ಮಾಡಿ ಸಂಚರಿಸು ತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸೊಂದನ್ನು ಇಂದು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದೇ ಪ್ರಯಾಣಿಕ ವಾಹನವು ರಹದಾರಿ ಉಲ್ಲಂಸಿ, ತೆರಿಗೆ ಪಾವತಿಸದೆ ಸಾರ್ವಜನಿಕರನ್ನು ಕೊಂಡೊಯ್ಯದಂತೆ ಎಲ್ಲಾ ಬಸ್ ಮಾಲಕರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ ಎಚ್ಚರಿಕೆ ನೀಡಿದ್ದಾರೆ.
Next Story





