ಬಗ್ದಾದ್: ಅಮೆರಿಕ ರಾಯಭಾರ ಕಚೇರಿ ಸಮೀಪಕ್ಕೆ ಅಪ್ಪಳಿಸಿದ ರಾಕೆಟ್‌ಗಳು
ಬಗ್ದಾದ್ (ಇರಾಕ್), ಜು. 29: ಅಮೆರಿಕದ ರಾಯಭಾರ ಕಚೇರಿಯಿರುವ ಅತಿ ಭದ್ರತೆಯ ಹಸಿರು ವಲಯದತ್ತ ಗುರುವಾಋ ಮುಂಜಾನೆ ಎರಡು ರಾಕೆಟ್‌ಗಳನ್ನು ಉಡಾಯಿಸಲಾಗಿದೆ ಎಂದು ಇರಾಕ್ ಭದ್ರತಾ ಮೂಲವೊಂದು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದೆ. ಆದರೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಅಥವಾ ಸೊತ್ತುಗಳಿಗೆ ಹಾನಿಯಾಗಿಲ್ಲ.
ಸೋಮವಾರ ಅಮೆರಿಕದ ಶ್ವೇತಭವನದಲ್ಲಿ ಅಲ್ಲಿನ ನಾಯಕರೊಂದಿಗೆ ಮಾತುಕತೆ ನಡೆಸಿದ ಬಳಿಕ ಇರಾಕ್ ಪ್ರಧಾನಿ ಮುಸ್ತಾಫ ಅಲ್-ಕದೀಮಿ ಸ್ವದೇಶಕ್ಕೆ ಹಿಂತಿರುಗುತ್ತಿದ್ದ ವೇಳೆ ದಾಳಿ ನಡೆದಿದೆ. ಇರಾಕ್‌ನಲ್ಲಿ ಅಮೆರಿಕ ನಡೆಸುತ್ತಿರುವ ಯುದ್ಧ ಕಾರ್ಯಾಚರಣೆ ಕೊನೆಗೊಳ್ಳುತ್ತದೆ ಎಂಬುದಾಗಿ ಈ ಮಾತುಕತೆಯ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇರಾಕ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿಗಳು ಪ್ರತಿನಿತ್ಯವೆಂಬಂತೆ ನಡೆಯುತ್ತಿವೆ. ಇರಾಕ್‌ನಲ್ಲಿರುವ ಇರಾನ್ ಪರ ಸಶಸ್ತ್ರ ಗುಂಪುಗಳು ಈ ದಾಳಿಗಳನ್ನು ನಡೆಸುತ್ತಿವೆ ಎನ್ನಲಾಗಿದೆ.
Next Story