ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಬಿಎಸ್‍ವೈ ನೀಡಿದ ಸೂಚನೆ ಏನು?

ಬೆಂಗಳೂರು, ಜು.29: ಸಚಿವ ಸಂಪುಟದಲ್ಲಿ ಯಾರಿಗೆ ಸ್ಥಾನ ನೀಡಬೇಕು ಎಂಬುದರ ಕುರಿತು ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧರಿಸುತ್ತಾರೆ. ಆದುದರಿಂದ, ಪದೇ ಪದೇ ನನ್ನನ್ನು ಭೇಟಿ ಮಾಡಿ ಸಚಿವ ಸ್ಥಾನದ ಬಗ್ಗೆ ಹೊರಗೆ ಮಾತನಾಡಬೇಡಿ ಎಂದು ಶಾಸಕರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವ ಸಂಪುಟ ರಚನೆಯಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಒಂದಿಬ್ಬರ ಹೆಸರನ್ನು ನಾನು ಶಿಫಾರಸ್ಸು ಮಾಡಬಹುದು ಅಷ್ಟೇ. ಆದುದರಿಂದ, ನನ್ನ ಭೇಟಿಗೆ ಬರುವವರು ಸೌಹಾರ್ದಯುತವಾಗಿ ಮಾತನಾಡಿ ಹೋಗಿ. ಪದೇ ಪದೇ ಭೇಟಿಯೂ ಮಾಡಬೇಡಿ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.
Next Story





