ಆರ್ಚರಿ: ಕ್ವಾರ್ಟರ್ ಫೈನಲ್ ನಲ್ಲಿ ದೀಪಿಕಾ ಕುಮಾರಿಗೆ ಸೋಲು

ಟೋಕಿಯೊ: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಭರವಸೆಯ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರ ವೈಯಕ್ತಿಕ ವಿಭಾಗದ ಸವಾಲು ಅಂತ್ಯವಾಗಿದೆ.
ಶುಕ್ರವಾರ ನಡೆದ ಮಹಿಳೆಯರ ವೈಯಕ್ತಿಕ ವಿಭಾಗದ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ದೀಪಿಕಾ ಅವರು ದಕ್ಷಿಣ ಕೊರಿಯಾದ ಸ್ಯಾನ್ ಆ್ಯನ್ ವಿರುದ್ಧ 0-6 ಅಂತರದಿಂದ ಸೋತಿದ್ದಾರೆ.
ಇದಕ್ಕೂ ಮೊದಲು ನಡೆದಿದ್ದ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ದೀಪಿಕಾ ಅವರು ರಷ್ಯಾದ ಕ್ಸೇನಿಯಾ ಪೆರೋವಾ ವಿರುದ್ಧ 6-5 ಸೆಟ್‌ಗಳಿಂದ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ತಲುಪಿದ್ದರು.
Next Story