ಯಾವುದೇ ಹುದ್ದೆ ಅಧಿಕಾರಿಯನ್ನು ತಹಶೀಲ್ದಾರ್ ಗ್ರೇಡ್-1, 2 ವೃಂದಕ್ಕೆ ನಿಯುಕ್ತಿಗೊಳಿಸಬಾರದು: ಅಧಿಸೂಚನೆ

ಬೆಂಗಳೂರು, ಜು. 30: ಯಾವುದೇ ಸೇವೆ ಅಥವಾ ಹುದ್ದೆ ಸೇರಿದ ಸರಕಾರಿ ಅಧಿಕಾರಿಯನ್ನು ತಹಶೀಲ್ದಾರ್ ಗ್ರೇಡ್-1 ಮತ್ತು ತಹಶೀಲ್ದಾರ್ ಗ್ರೇಡ್-2 ವೃಂದದ ಹುದ್ದೆಗಳಿಗೆ ವರ್ಗಾವಣೆ, ನಿಯೋಜನೆ ಅಥವಾ ಸ್ಥಳ ನಿಯುಕ್ತಿಗೊಳಿಸತಕ್ಕದ್ದಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಹೇಮಲತಾ ಜಿ. ಅವರು ಶುಕ್ರವಾರ ಅಧಿಸೂಚನೆ ಹೊರಡಿಸಿದ್ದಾರೆ.
ಕರ್ನಾಟಕ ನಾಗರಿಕ ಸೇವಾ(ಸಾಮಾನ್ಯ ನೇಮಕಾತಿ) ನಿಯಮಗಳು 1977ಕ್ಕೆ ತಿದ್ದುಪಡಿ ತಂದಿದ್ದು, ಈಗಾಗಲೇ ರಾಜ್ಯಪತ್ರದಲ್ಲಿ ಆ ಕರಡು ನಿಯಮಗಳು ಪ್ರಕಟವಾಗಿದ್ದು ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿತ್ತು. ಅಲ್ಲದೆ, ಸದರಿ ಆಕ್ಷೇಪಣೆಗಳನ್ನು ಪರಿಗಣಿಸಿದ್ದು ಇದೀಗ ನಿಯಮಗಳನ್ನು ರಚಿಸಲಾಗುತ್ತದೆ ಎಂದು ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
Next Story





