ಒಲಿಂಪಿಕ್ಸ್: ಸೆಮಿ ಫೈನಲ್ ನಲ್ಲಿ ಶರಣಾದ ಪಿ.ವಿ.ಸಿಂಧು

ಟೋಕಿಯೊ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಸೆಮಿ ಫೈನಲ್ ಸುತ್ತಿನಲ್ಲಿ ಚೈನೀಸ್ ತೈಪೆಯ ವಿಶ್ವದ ಮಾಜಿ ನಂ.1 ಶ್ರೇಯಾಂಕದ ಆಟಗಾರ್ತಿ ತೈ ಝು-ಯಿಂಗ್ ವಿರುದ್ಧ 18-21, 11-21 ನೇರ ಗೇಮ್ ಗಳ ಅಂತರದಿಂದ ಸೋಲುವುದರೊಂದಿಗೆ ನಿರಾಸೆಗೊಳಿಸಿದ್ದಾರೆ.
ಈ ಮೂಲಕ ಸಿಂಧು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಇಲ್ಲವೇ ಚಿನ್ನ ಗೆಲ್ಲುವ ಅಪೂರ್ವ ಅವಕಾಶದಿಂದ ವಂಚಿತರಾದರು.
ಹೈದರಾಬಾದ್ ಆಟಗಾರ್ತಿ ರವಿವಾರ ಕಂಚಿನ ಪದಕಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಚೀನಾದ ಹಿ ಬಿಂಗ್ ಜಿಯಾವೊ ಸವಾಲನ್ನು ಎದುರಿಸಲಿದ್ದಾರೆ.
Next Story