ಒಲಿಂಪಿಕ್ಸ್: ಕಂಚಿನ ಪದಕದ ಸುತ್ತಿನಲ್ಲೂ ಸೋತ ಜೊಕೊವಿಕ್

ಟೋಕಿಯೊ: ಇಪ್ಪತ್ತು ಬಾರಿ ಪ್ರಮುಖ ಪ್ರಶಸ್ತಿಯನ್ನು ಜಯಿಸಿರುವ ಸರ್ಬಿಯ ಟೆನಿಸ್ ಪಟು ನೊವಾಕ್ ಜೊಕೊವಿಕ್ ಶನಿವಾರ ಟೋಕಿಯೊ ಒಲಿಂಪಿಕ್ಸ್ ನ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲೂ ಮುಗ್ಗರಿಸಿದ್ದಾರೆ.
ಗೋಲ್ಡನ್ ಗ್ರ್ಯಾನ್ ಸ್ಲಾಮ್ ಕನಸು ಈಡೇರಿಸಿಕೊಳ್ಳಲು ವಿಫಲವಾಗಿರುವ ಜೊಕೊವಿಕ್ ಅವರು ಸ್ಪೇನ್ ನ ಕರೆನೊ ಬುಸ್ಟಾ ವಿರುದ್ದ 6-4, 6-7(6/8), 6-3 ಸೆಟ್ ಗಳ ಅಂತರದಿಂದ ಸೋತಿದ್ದಾರೆ.
ಈ ಸೋಲಿನೊಂದಿಗೆ ವಿಶ್ವದ ನಂ.1 ಆಟಗಾರ ಜೊಕೊವಿಕ್ ಟೋಕಿಯೊದಲ್ಲಿ ಪದಕ ಗೆಲ್ಲದೇ ನಿರ್ಗಮಿಸಿದ್ದಾರೆ.
Next Story