ಲೈಂಗಿಕ ಅಲ್ಪಸಂಖ್ಯಾತರಿಗೆ ಹಲ್ಲೆ: ಆರೋಪಿ ಬಂಧನ
ಮಂಗಳೂರು, ಜು.31: ನಗರದ ಬೈಕಂಪಾಡಿ ಸಮೀಪ ಲೈಂಗಿಕ ಅಲ್ಪಸಂಖ್ಯಾತರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಓರ್ವನನ್ನು ಬಂಧಿಸಲಾಗಿದೆ.
ಸ್ಥಳೀಯ ನಿವಾಸಿ ನಿಖಿಲ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ಪ್ರಕರಣ ವಿವರ: ಬೇರೆ ಜಿಲ್ಲೆಯಿಂದ ಬಂದು ಭಿಕ್ಷಾಟನೆ ಮಾಡುತ್ತಿದ್ದಾರೆಂದು ಆರೋಪಿಸಿ ಜು.26ರಂದು ರಾತ್ರಿ ನಿಖಿಲ್ ತನ್ನ ಐವರು ಸಂಗಡಿಗರ ಜತೆ ಸೇರಿ ನೀಲಾ, ಪೂರ್ಣಿಮಾ, ಶಾಂತಾ, ಹುಲಿಗೆಮ್ಮ ಮತ್ತು ಪಾರ್ವತಿ ಎಂಬವರ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ಪಣಂಬೂರು ಪೊಲೀಸರು ಆರೋಪಿಯೊಬ್ಬನನ್ನು ಉಡುಪಿಯಲ್ಲಿ ಬಂಧಿಸಿದ್ದಾರೆ. ಉಳಿದವರಿಗೆ ಹುಡುಕಾಟ ಮುಂದುವರಿದಿದೆ.
Next Story





