Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕ್ಷುದ್ರಗ್ರಹ ಭೂಮಿಗೆ ಬಡಿದರೆ...?

ಕ್ಷುದ್ರಗ್ರಹ ಭೂಮಿಗೆ ಬಡಿದರೆ...?

ಆರ್. ಬಿ. ಗುರುಬಸವರಾಜಆರ್. ಬಿ. ಗುರುಬಸವರಾಜ1 Aug 2021 12:05 AM IST
share
ಕ್ಷುದ್ರಗ್ರಹ ಭೂಮಿಗೆ ಬಡಿದರೆ...?

ಟಿ.ವಿ.ಯಲ್ಲಿ ‘ಡೀಪ್ ಇಂಪ್ಯಾಕ್ಟ್’ ಎಂಬ ಹಾಲಿವುಡ್ ಸಿನೆಮಾ ನೋಡಿದ ಸಿಂಧು ಮಧ್ಯರಾತ್ರಿ ತಡವಾಗಿ ಮಲಗಿದಳು. ಸಿನೆಮಾ ಗುಂಗಿನಲ್ಲೇ ಮಲಗಿದ್ದರಿಂದ ಯಾವುದೋ ಆಕಾಶಕಾಯವೊಂದು ಭೂಮಿಗೆ ಅಪ್ಪಳಿಸಿದಂತೆ, ಭೂಮಿಯು ಓಲಾಡಿದಂತೆ ಕನಸು ಕಾಣುತ್ತಿದ್ದಳು. ಅಲುಗಾಟಕ್ಕೆ ಎಚ್ಚರಗೊಂಡ ಸಿಂಧು ಸಹೋದರಿ ಬಿಂದು ಪಕ್ಕದಲ್ಲಿ ನಿಂತಿರುವುದನ್ನು ಗಮನಿಸಿದಳು. ಅಲುಗಾಟ ಭೂಮಿಯದ್ದಲ್ಲ, ಬಿಂದು ತನ್ನನ್ನು ಎಬ್ಬಿಸಲು ಮಾಡಿದ ಪ್ರಯತ್ನ ಎಂಬುದು ತಿಳಿಯಿತು. ಮುಖ ತೊಳೆದುಕೊಂಡು ಹಾಲು ಕುಡಿದು ತಂದೆಯತ್ತ ಬಂದಳು. ವ್ಯಾಯಾಮದಲ್ಲಿ ನಿರತರಾದ ತಂದೆಗೆ ‘‘ಪಪ್ಪಾ ಕ್ಷುದ್ರಗ್ರಹಗಳೆಂದರೇನು? ಅವು ಭೂಮಿಗೆ ಬಡಿದರೆ ಏನಾಗುತ್ತೆ?’’ ಎಂದು ಕೇಳಿದಳು. ವ್ಯಾಯಾಮವನ್ನು ಮೊಟಕುಗೊಳಿಸಿದ ತಂದೆ ಮಗಳ ಪ್ರಶ್ನೆಗೆ ಉತ್ತರಿಸಲು ಪ್ರಾರಂಭಿಸಿದರು.

ಬಾಹ್ಯಾಕಾಶದಲ್ಲಿನ ತೇಲುವ ಕಲ್ಲುಗಳೇ ಕ್ಷುದ್ರಗ್ರಹಗಳು. ಅವುಗಳಲ್ಲಿ ಪ್ರತಿದಿನ ಸುಮಾರು 100 ಟನ್‌ಗಳಷ್ಟು ಕಲ್ಲುಗಳು ಭೂಮಿಯ ಮೇಲೆ ಬೀಳುತ್ತವೆ. ಹೀಗೆ ಬಿದ್ದ ಬಾಹ್ಯಾಕಾಶದ ಕಲ್ಲುಗಳೆಲ್ಲಿ ಎಂಬ ಪ್ರಶ್ನೆ ಮೂಡುವುದು ಸಹಜ. ಬಹುತೇಕ ಕ್ಷುದ್ರಗ್ರಹಗಳು ಭೂಮಿಯನ್ನು ತಲುಪುವ ಮೊದಲೇ ಆಕಾಶದಲ್ಲಿಯೇ ಉರಿದು ಬೂದಿಯಾಗುತ್ತವೆ. ರಾತ್ರಿಯ ಆಕಾಶದಲ್ಲಿ ಹಠಾತ್ತನೇ ಪ್ರಜ್ವಲಿಸುವ ವಸ್ತುವೊಂದು ಭೂಮಿಯ ಕಡೆಗೆ ವೇಗವಾಗಿ ಬರುವುದನ್ನು ನೀವು ನೋಡಿರಬಹುದು. ಇದೇ ಕ್ಷುದ್ರಗ್ರಹ. ಚಿಕ್ಕ ಗ್ರಹಗಳಂತಿರುವ ಆಕಾಶಕಾಯಗಳಾದ ಕ್ಷುದ್ರಗ್ರಹಗಳನ್ನು ಬಾಹ್ಯಾಕಾಶದ ಕಲ್ಲುಗಳು ಎನ್ನುತ್ತಾರೆ. ಕ್ಷುದ್ರಗ್ರಹಗಳು ಸೌರವ್ಯೆಹ ನಿರ್ಮಾಣದ ನಂತರದ ಶೇಷ ವಸ್ತುಗಳನ್ನು ಪ್ರತಿನಿಧಿಸುತ್ತವೆ. ಅವು ಮಂಗಳ ಮತ್ತು ಗುರು ಗ್ರಹಗಳ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರೀಕೃತಗೊಂಡಿವೆ. ಗಾತ್ರದಲ್ಲಿ 10 ಮೀಟರ್‌ನಿಂದ 1,000 ಕಿ.ಮೀ. ಅಗಲ ಹೊಂದಿವೆ. 1801ರಲ್ಲಿ ಮೊತ್ತಮೊದಲಿಗೆ ಇಟಲಿಯ ಪಿಯಜ್ಜಿ ಎಂಬ ಖಗೋಳಶಾಸತ್ರಜ್ಞನು ಸಿರಿಸ್ ಎಂಬ ಕ್ಷುದ್ರಗ್ರಹವನ್ನು ಕಂಡುಹಿಡಿದನು. ಇದು ಎಲ್ಲ ಕ್ಷುದ್ರಗ್ರಹಗಳಲ್ಲೇ ಅತ್ಯಂತ ದೊಡ್ಡ ಕ್ಷುದ್ರಗ್ರಹ. ವಿಜ್ಞಾನಿಗಳು ಇಂದಿನ ವರೆಗೆ ಸುಮಾರು 7,000 ಕ್ಷುದ್ರಗ್ರಹಗಳನ್ನು ಗುರುತಿಸಿರುವರು. ಇತ್ತೀಚಿನ ಅಂದಾಜಿನ ಪ್ರಕಾರ ಸೂರ್ಯನ ಸುತ್ತ ತಿರುಗುವ ಕ್ಷುದ್ರಗ್ರಹಗಳ ಸಂಖ್ಯೆ ಸುಮಾರು 40,000ಕ್ಕಿಂತ ಹೆಚ್ಚಾಗಿದೆ. ಉಂಡಾಡಿ ಗುಂಡನಂತೆ ಸ್ವತಂತ್ರವಾಗಿ ತಿರುಗಾಡಿಕೊಂಡಿರುವ ಕ್ಷುದ್ರಗ್ರಹಗಳಿಗೆ ಗ್ರಹಗಳಂತೆ ನಿರ್ದಿಷ್ಟ ಕಕ್ಷೆಯಿಲ್ಲ. ಎಲ್ಲೆಂದರಲ್ಲಿ ಅಂಡಲೆಯುವ ಅಲೆಮಾರಿ ಕ್ಷುದ್ರಗ್ರಹಗಳು ಯಾವ ಆಕಾಶಕಾಯವನ್ನಾದರೂ ಢಿಕ್ಕಿ ಹೊಡೆಯಬಹುದು. ಹಾಗೆಯೇ ಭೂಮಿಗೂ ಢಿಕ್ಕಿ ಹೊಡೆಯುವ ಸಂಭವ ಇಲ್ಲ ಎನ್ನುವಂತಿಲ್ಲ. ಹೀಗೆ ಅಂಡಲೆಯುವ ಕ್ಷುದ್ರಗ್ರಹ ಒಂದುವೇಳೆ ಭೂಮಿಗೆ ಢಿಕ್ಕಿ ಹೊಡೆದರೆ ಏನಾಗುತ್ತದೆ? ಎಂಬುದು ಇಂದಿನ ಚರ್ಚಾ ವಿಷಯ.

ಸೌರವ್ಯೆಹ ನಿರ್ಮಾಣಗೊಂಡಾಗಿನಿಂದ ಇಂದಿನವರೆಗೂ ಕ್ಷುದ್ರಗ್ರಹಗಳು ಭೂಮಿಗೆ ಢಿಕ್ಕಿ ಹೊಡೆಯುತ್ತಲೇ ಇವೆ. ಲಕ್ಷಾಂತರ ವರ್ಷಗಳ ಹಿಂದೆ ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿದ್ದರಿಂದ ಡೈನೋಸಾರ್‌ಗಳ ನಾಶವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಜೂನ್ 30, 1908ರಲ್ಲಿ ಸೈಬೀರಿಯಾದ ತುಂಗುಸ್ಕಾ ಪ್ರದೇಶದಲ್ಲಿ 40 ಮೀಟರ್ ವಿಸ್ತಾರದ ಕ್ಷುದ್ರಗ್ರಹವೊಂದು ಅಪ್ಪಳಿಸಿತು. ಇದರ ಪ್ರಭಾವ ಎಷ್ಟಿತ್ತೆಂದರೆ ಲಂಡನ್ ನಗರದಷ್ಟು ಕಾಡು ಪ್ರದೇಶವು ನಾಶವಾಯಿತು.

20 ಮತ್ತು 21ನೇ ಶತಮಾನದಲ್ಲಿ ಒಟ್ಟು 18 ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸಿವೆ. ಅವುಗಳಲ್ಲಿ ಬಹುತೇಕ ಕ್ಷುದ್ರಗ್ರಹಗಳು ತೀವ್ರ ಪರಿಣಾಮಕಾರಿಯಾಗಿಲ್ಲ. 2004ರಲ್ಲಿ ಅಪೋಫಿಸ್ ಎಂಬ ಕ್ಷುದ್ರಗ್ರಹವನ್ನು ಬಾಹ್ಯಾಕಾಶ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇದು 2068ರಲ್ಲಿ ಭೂಮಿಯತ್ತ ಬರಲಿದೆಯಂತೆ. ಇದು ಲಕ್ಷದಲ್ಲಿ ಒಂದರಷ್ಟು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 2001 ಎಫ್.ಒ.32 ಹೆಸರಿನ ಕ್ಷುದ್ರಗ್ರಹವೊಂದು 2021ರ ಮಾರ್ಚ್‌ನಲ್ಲಿ ಭೂಮಿಯ ಸಮೀಪ ಹಾದು ಹೋಯಿತು. ಆದರೆ ಅದು ಯಾವುದೇ ಹಾನಿಯನ್ನುಂಟು ಮಾಡಲಿಲ್ಲ. ಕ್ಷುದ್ರಗ್ರಹದ ದ್ರವ್ಯರಾಶಿಯನ್ನು ಆಧರಿಸಿ ವೇಗದಲ್ಲಿ ಬದಲಾವಣೆಗಳಿರುತ್ತವೆ. ಕ್ಷುದ್ರಗ್ರಹಗಳು ಭೂ ವಾತಾವರಣದಲ್ಲಿ ಗಂಟೆಗೆ ಸುಮಾರು 30,000 ಕಿ.ಮೀ. ವೇಗದಲ್ಲಿ ಭೂಮಿಯನ್ನು ಅಪ್ಪಳಿಸುತ್ತವೆ. ಇದು ಒಂದು ಮಿಲಿಯನ್ ಮೆಗಾಟನ್ ಬಾಂಬ್‌ನ ಶಕ್ತಿಗೆ ಸಮನಾಗಿರುತ್ತದೆ. ಒಂದು ಮಿಲಿಯನ್ ಮೆಗಾಟನ್ ಊಹಿಸಿಕೊಳ್ಳುವುದೇ ಕಷ್ಟ. ಒಂದು ಸಣ್ಣ ಉದಾಹರಣೆ ಮೂಲಕ ಅದನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡೋಣ. ಒಂದು ಸಾಮಾನ್ಯ ಮನೆಯ(2ಬಿ.ಎಚ್.ಕೆ) ಗಾತ್ರದ ಕ್ಷುದ್ರಗ್ರಹವು ಗಂಟೆಗೆ 30,000 ಕಿ.ಮೀ. ವೇಗದಲ್ಲಿ ಭೂಮಿಗೆ ಅಪ್ಪಳಿದರೆ 1945ರಲ್ಲಿ ಹಿರೋಶಿಮಾದ ಮೇಲೆ ಬಿದ್ದ ಲಿಟ್ಲ್‌ಬಾಯ್ ಬಾಂಬ್‌ನ ಶಕ್ತಿಗೆ ಸಮನಾಗಿರುತ್ತದೆ. ಅಂದಾಜು 20 ಕಿಲೋಟನ್‌ಗಳು.

ಕ್ಷುದ್ರಗ್ರಹವು ಇಷ್ಟೊಂದು ವೇಗದಲ್ಲಿ ಭೂಮಿಗೆ ಅಪ್ಪಳಿದರೆ ಭೂಮಿಯ ಮೇಲೆ ಏನಾದರೂ ಉಳಿದೀತೇ?. ಆಧುನಿಕ ಅಬೇಧ್ಯ ಕೋಟೆಗಳೆನಿಸಿದ ನೂರಾರು ಗಗನಚುಂಬಿ ಕಟ್ಟಡಗಳನ್ನು ನೆಲಸಮ ಮಾಡುವಷ್ಟು ಶಕ್ತಿ ಒಂದು ಕ್ಷುದ್ರಗ್ರಹಕ್ಕಿರುತ್ತದೆ. ಇಷ್ಟೊಂದು ಪ್ರಭಾವಶಾಲಿ ಇರುವ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿದ್ದರೆೆ ಏನಾಗುತ್ತಿತ್ತು ಎಂದು ಯೋಚಿಸಿದರೆ ಭಯವಾಗುತ್ತದೆ. ಕ್ಷುದ್ರಗ್ರಹ ಭೂಮಿಗೆ ಅಪ್ಪಳಿದರೆ ವಾತಾವರಣದಲ್ಲಿ ಧೂಳಿನ ಪ್ರಮಾಣ ಹೆಚ್ಚುತ್ತದೆ. ಈ ಧೂಳು ಸೂರ್ಯನ ಶಾಖವು ಭೂಮಿಗೆ ತಲುಪುವುದನ್ನು ತಡೆಯುತ್ತದೆ. ಇದರಿಂದ ಭೂಮಿಯ ತಾಪಮಾನ ಕಡಿಮೆಯಾಗುತ್ತದೆ. ತಾಪಮಾನ ಕಡಿಮೆಯಾದರೆ ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಯಲು ಅಡ್ಡಿಯಾಗುತ್ತದೆ. ಇದರಿಂದ ಬಹುತೇಕ ಜೀವಿಗಳಿಗೆ ಆಹಾರ ಮತ್ತು ಆಮ್ಲಜನಕದ ಕೊರತೆ ಉಂಟಾಗುತ್ತದೆ. ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವುದರಿಂದ ಭೂಮಿಯ ಅಂತರಾಳದ ಶಾಖದಲ್ಲಿ ವ್ಯತ್ಯಾಸವಾಗುತ್ತದೆ. ಭೂಕಾಂತಕ್ಷೇತ್ರದಲ್ಲಿ ಬದಲಾವಣೆಗಳಾಗುತ್ತವೆ. ಭೂಕಂಪ ಸಂಭವಿಸಬಹುದು. ಭೂಮಿಯ ಅಂತರಾಳದ ಉಷ್ಣತೆಯ ಹೆಚ್ಚಳದಿಂದ ಜ್ವಾಲಾಮುಖಿಗಳ ಸಂಖ್ಯೆ ಹೆಚ್ಚಾಗುತ್ತಿದ್ದವು.

ಒಂದುವೇಳೆ ಇಂತಹ ಕ್ಷುದ್ರಗ್ರಹ ಏನಾದರೂ ಸಾಗರದಲ್ಲಿ ಬಿದ್ದರೆ, ನೂರಾರು ಅಡಿ ಎತ್ತರದ ಬೃಹತ್ ಅಲೆಗಳಿಗೆ ಕಾರಣವಾಗುತ್ತದೆ. ಬೃಹತ್ ಅಲೆಗಳು ಸುನಾಮಿಯನ್ನು ಸೃಷ್ಟಿಸಬಹುದು. ಇದರಿಂದ ಸಾಕಷ್ಟು ಪ್ರಮಾಣದ ಜೀವ ಹಾನಿಯಾಗುತ್ತದೆ. ಕರಾವಳಿ ತೀರಗಳು ಬಹುದೊಡ್ಡ ನಷ್ಟವನ್ನು ಅನುಭವಿಸುವಂತಾಗುತ್ತದೆ. ಅಲ್ಲದೆ ಸಾಗರಗಳ ನೀರ್ಗಲ್ಲುಗಳು ಕರಗಿ ಸಮುದ್ರದ ಮಟ್ಟ ಏರಿಕೆಯಾಗುತ್ತಿತ್ತು, ಇದರಿಂದ ಈಗಿರುವ ಕರಾವಳಿ ತೀರ ಪ್ರದೇಶಗಳು ಸಮುದ್ರದ ಪಾಲಾಗುತ್ತಿದ್ದವು. ಭೂಮಿಯ ಮೇಲೆ ನೀರಿನ ಪ್ರಮಾಣ ಈಗಿನ ಪ್ರಮಾಣಕ್ಕಿಂತ ಹೆಚ್ಚಾಗುತ್ತಿತ್ತು. ಉಳುಮೆ ಭೂಮಿಯ ಪ್ರಮಾಣ ಕಡಿಮೆಯಾಗುತ್ತಿತ್ತು. ಒಂದು ಮೈಲಿನಷ್ಟು ವ್ಯಾಸದ ಕ್ಷುದ್ರಗ್ರಹವೇನಾದರೂ ಭೂಮಿಗೆ ಅಪ್ಪಳಿಸಿದರೆ ಇಡೀ ಭೂಗ್ರಹದ ಸಸ್ಯವರ್ಗ, ಪ್ರಾಣಿವರ್ಗ ಸೇರಿದಂತೆ ಎಲ್ಲಾ ಜೀವಿಗಳ ನಾಶಕ್ಕೆ ಕಾರಣವಾಗುತ್ತದೆ. ಇದು ಮತ್ತೊಂದು ಪೆರ್ಮಿಯನ್ ಟ್ರಯಾಸಿಸ್ ದುರಂತಕ್ಕೆ ಕಾರಣವಾಗುತ್ತದೆ. ಪೆರ್ಮಿಯನ್ ಟ್ರಯಾಸಿಸ್ ದುರಂತವು ಡೈನೋಸಾರ್ ಸೇರಿದಂತೆ ಭೂಮಿಯ ಮೇಲಿನ ಶೇಕಡಾ 90ರಷ್ಟು ಜೀವಿಗಳ ನಾಶಕ್ಕೆ ಕಾರಣವಾಗಿತ್ತು.

ಇದನ್ನು ಚೇತರಿಸಿಕೊಳ್ಳಲು 30 ದಶಲಕ್ಷ ವರ್ಷಗಳು ಬೇಕಾದವು. ಬಹುತೇಕ ಕ್ಷುದ್ರಗ್ರಹಗಳು ಭೂ ವಾತಾವಣದಲ್ಲೇ ಸ್ಫೋಟಗೊಳ್ಳುತ್ತವೆ. ಎಲ್ಲಾ ಕ್ಷುದ್ರಗ್ರಹಗಳು ನೇರವಾಗಿ ಭೂಮಿಯ ಮೇಲೆ ಅಪ್ಪಳಿಸಿದ್ದರೆ ಚಂದ್ರನ ಮೇಲ್ಮೈಯಂತೆ ಭೂಮಿಯ ಮೇಲ್ಮೈ ಮೇಲೆ ಕುಳಿಗಳ ಸಂಖ್ಯೆ ಹೆಚ್ಚಾಗುತ್ತಿತ್ತು. ಈಗಿರುವ ಮಣ್ಣು ಫಲವತ್ತತೆ ಕಳೆದುಕೊಂಡು ಬರಡು ನೆಲವಾಗುತ್ತಿತ್ತು. ಬಹುತೇಕ ನದಿಗಳು ಬತ್ತಿ ಹೋಗುತ್ತಿದ್ದವು. ಎಲ್ಲೆಡೆ ನೀರಿಗಾಗಿ ಹಾಹಾಕಾರ ಏಳುತ್ತಿತ್ತು. ಕ್ಷುದ್ರಗ್ರಹಗಳು ಪದೇ ಪದೇ ಭೂಮಿಗೆ ಅಪ್ಪಳಿಸಿದರೆ ಈಗಿನ ವಾತಾವರಣ ನಾಶವಾಗುತ್ತಿತ್ತು. ಅತಿನೇರಳೆ ದಟ್ಟ ಹೊಗೆ, ಧೂಳು ಎಲ್ಲೆಡೆ ಆವರಿಸಿಕೊಳ್ಳುತ್ತಿತ್ತು. ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿತ್ತು. ಹಸಿರುಮನೆ ಅನಿಲಗಳ ಪ್ರಮಾಣ ಹೆಚ್ಚಾಗಿ ಭೂಮಿಯು ಅತಿನೇರಳೆ ಕಿರಣಗಳಿಂದ ತತ್ತರಿಸುವಂತಾಗುತ್ತಿತ್ತು.

ಇತ್ತೀಚಿನ ವರ್ಷಗಳಲ್ಲಿ ಕ್ಷುದ್ರಗ್ರಹಗಳ ಚಲನೆಯ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಕ್ಷುದ್ರಗ್ರಹಗಳ ಅಧ್ಯಯನ ಒಂದು ಹೊಸ ಶಾಖೆಯಾಗಿ ಬೆಳೆದಿದೆ. ಹವ್ಯಾಸಿಗಳೇ ಹೆಚ್ಚಾಗಿ ಪಾಲ್ಗೊಳ್ಳುತ್ತಿರುವ ಈ ಚಟುವಟಿಕೆಯಲ್ಲಿ ತಾಳ್ಮೆಯಿಂದ ಸೂಕ್ಷ್ಮ ಕಾಯಗಳನ್ನು ಅಭ್ಯಸಿಸಲಾಗುತ್ತದೆ. ಇದಕ್ಕೆ ‘ನೀಟ್’ (ಘೆಉಅ-ನಿಯರ್ ಅರ್ತ್ ಆಸ್ಟರಾಯ್ಡ ಟ್ರಾಕಿಂಗ್) ಎಂಬ ಹೆಸರಿದೆ. ಇಂದಿನ ಸುಧಾರಿತ ತಂತ್ರಜ್ಞಾನದಿಂದ ಕ್ಷುದ್ರಗ್ರಹಗಳು ಭೂಮಿಯನ್ನಪ್ಪಳಿಸದಂತೆ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶ. ಇಲ್ಲಿಯವರೆಗೂ ನಮ್ಮ ಭೂಮಿಗೆ ಕ್ಷುದ್ರಗ್ರಹಗಳಿಂದ ಯಾವುದೇ ಅಪಾಯಕಾರಿ ಅನಾಹುತಗಳು ಸಂಭವಿಸಿಲ್ಲ. ಮುಂದೆಯೂ ಸಂಭವಿಸದೇ ಇರಲಿ ಎಂಬುದೇ ನಮ್ಮೆಲ್ಲರ ಆಶಯ.

share
ಆರ್. ಬಿ. ಗುರುಬಸವರಾಜ
ಆರ್. ಬಿ. ಗುರುಬಸವರಾಜ
Next Story
X