ಕೋವಿಡ್: ದೇಶದಲ್ಲಿ ಒಂದೇ ದಿನ 41,831 ಪ್ರಕರಣ

ಹೊಸದಿಲ್ಲಿ, ಆ.1: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ ಸೋಂಕಿನ 41,831 ಹೊಸ ಪ್ರಕರಣಗಳು ವರದಿಯಾಗಿವೆ. 541 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ತಿಳಿಸಿದೆ.
ಐದನೇ ದಿನವಾದ ರವಿವಾರ ಕೂಡ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ 40,000 ದಾಟಿದೆ.
ಕೇರಳ ರಾಜ್ಯವೊಂದರಲ್ಲೇ 20,624 ಪ್ರಕರಣಗಳು ವರದಿಯಾಗಿವೆ. ನಿರಂತರ ಐದನೇ ದಿನವಾದ ರವಿವಾರ ಕೂಡ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಶನಿವಾರದ ವರೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 4,10,952ಕ್ಕೆ ತಲುಪಿತ್ತು. ಇದು ಒಟ್ಟು ಸೋಂಕಿನ ಶೇ. 1.30. ಪ್ರಕರಣಗಳ ಕೇರಳದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1.65 ಲಕ್ಷ ತಲುಪಿತ್ತು.
ಇದರೊಂದಿಗೆ ದೇಶದಲ್ಲಿ ಕೊರೋನ ಸೋಂಕಿನ ಒಟ್ಟು ಪ್ರಕರಣಗಳ ಸಂಖ್ಯೆ 3,16,55,824ಕ್ಕೆ ತಲುಪಿದೆ. ಒಟ್ಟು ಸಾವಿನ ಸಂಖ್ಯೆ 4,24,351ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಸಂಭವಿಸಿದ ಒಟ್ಟು 541 ಸಾವಿನಲ್ಲಿ ಮಹಾರಾಷ್ಟ್ರದಿಂದ 231 ಹಾಗೂ ಕೇರಳದಿಂದ 80 ಸಾವು ವರದಿಯಾಗಿದೆ.
ಕನಿಷ್ಠ 3,08,20,521 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ದಿನನಿತ್ಯದ ಪಾಸಿಟಿವಿ ದರ ಶೇ. 2.34, ವಾರದ ಪಾಸಿಟಿವಿಟಿ ದರ ಶೇ. 2.42 ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯದ ದತ್ತಾಂಶ ತಿಳಿಸಿದೆ.
ದೇಶದಲ್ಲಿ ಇಂದಿನ ವರೆಗೆ ಕೋವಿಡ್ ಲಸಿಕೆಯ 47,02,98,596 ಕ್ಕೂ ಅಧಿಕ ಡೋಸ್ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 60,15,842 ಡೋಸ್ ಗಳನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.







