ಇತಿಹಾಸ ನಿರ್ಮಿಸಿದ ಭಾರತದ ಮಹಿಳಾ ಹಾಕಿ ತಂಡಕ್ಕೆ ಟ್ವಿಟರ್ ನಲ್ಲಿ ಅಭಿನಂದನೆಗಳ ಸುರಿಮಳೆ
‘ಚಕ್ ದೇ ಇಂಡಿಯಾ’ ಎಂದ ವೀರೇಂದ್ರ ಸೆಹ್ವಾಗ್
photo : PTI
ಹೊಸದಿಲ್ಲಿ: ಹ್ಯಾಟ್ರಿಕ್ ಸೋಲಿನಿಂದ ಚೇತರಿಸಿಕೊಂಡ ಭಾರತದ ಮಹಿಳಾ ಹಾಕಿ ತಂಡ ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ಸೆಮಿಫೈನಲ್ ತಲುಪುವ ಮೂಲಕ ಇತಿಹಾಸ ಸೃಷ್ಟಿಸಿದೆ. ಸೋಮವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಗುರ್ಜಿತ್ ಕೌರ್ ಅವರ ಸಾಹಸದಿಂದ ಭಾರತವು ಬಲಿಷ್ಠ ಆಸ್ಟ್ರೇಲಿಯಾವನ್ನು 1-0 ಅಂತರದಿಂದ ಮಣಿಸಿ ಆಘಾತ ನೀಡಿತು ಹಾಗೂ ಟೋಕಿಯೊ 2020 ರಲ್ಲಿ ಸೆಮಿಫೈನಲ್ ತಲುಪಿತು.
ರಾಣಿ ರಾಂಪಾಲ್ ನೇತೃತ್ವದ ಭಾರತದ ಮಹಿಳಾ ತಂಡಕ್ಕೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಸಾಮಾಜಿಕ ಮಾಧ್ಯಮದ ಮೂಲಕ ಅಭಿನಂದನೆಯ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವಿಟರ್ನಲ್ಲಿ ಮಹಿಳಾ ತಂಡವನ್ನು ಪ್ರಶಂಸಿಸಿದ್ದಾರೆ.
"ಇದೊಂದು ಸಂಪೂರ್ಣ ಅದ್ಭುತ ಕ್ಷಣ. ನಮ್ಮ ಹುಡುಗಿಯರಿಗೆ ಇದು ಮೊದಲ ಒಲಿಂಪಿಕ್ಸ್ ಹಾಕಿ ಸೆಮಿಫೈನಲ್ಸ್. ಇದು ಹೆಮ್ಮೆಯಿಂದ ತುಂಬಿದೆ. ಚಕ್ ದೇ ಇಂಡಿಯಾ #ಹಾಕಿ "ಎಂದು ಸೆಹ್ವಾಗ್ ಬರೆದಿದ್ದಾರೆ.
ಏತನ್ಮಧ್ಯೆ, ಕಿರಣ್ ರಿಜಿಜು ಅವರು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ "ಭಾರತದ ಕನಸು ನನಸಾಗುತ್ತಿದೆ! ನಮ್ಮ ಮಹಿಳಾ ಹಾಕಿ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿದೆ! ಭಾರತದ ಪುರುಷರು ಮತ್ತು ಮಹಿಳಾ ತಂಡಗಳು ಟೋಕಿಯೋ 2020 ರ ಒಲಿಂಪಿಕ್ಸ್ನಲ್ಲಿ ಸೆಮಿಫೈನಲ್ ತಲುಪಿವೆ! ನನ್ನ ಉತ್ಸಾಹ ಹಾಗೂ ಸಂತೋಷ ಬಣ್ಣಿಸಲು ಪದಗಳು ಸಿಗುತ್ತಿಲ್ಲ ಎಂದು ಟ್ವೀಟಿಸಿದರು.
"ಅದ್ಭುತ ಪ್ರದರ್ಶನ !!! ಮಹಿಳಾ ಹಾಕಿ ಟೀಮ್ ಇಂಡಿಯಾ ಟೋಕಿಯೋ 2020 ರ ಪ್ರತಿ ಹೆಜ್ಜೆಯೊಂದಿಗೆ ಇತಿಹಾಸವನ್ನು ಬರೆಯುತ್ತಿದೆ! ನಾವು ಮೊದಲ ಬಾರಿಗೆ ಆಸ್ಟ್ರೇಲಿಯಾವನ್ನು ಸೋಲಿಸಿ ಒಲಿಂಪಿಕ್ಸ್ನ ಸೆಮಿಫೈನಲ್ಗೆ ತಲುಪಿದ್ದೇವೆ. 130 ಕೋಟಿ ಭಾರತೀಯರು ಮಹಿಳಾ ಹಾಕಿ ತಂಡದ ಬೆನ್ನ ಹಿಂದೆ ಇದ್ದೇವೆ" ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಟ್ವೀಟ್ ಮಾಡಿದ್ದಾರೆ.
Itni khushi shayad kisi jeet par mehsoos huyi hogi!
— Virender Sehwag (@virendersehwag) August 2, 2021
Absolute Wow moment. First ever Olympics hockey semi-finals for our girls. Filled with pride.
Chak De India #Hockey pic.twitter.com/c9I5KZFaZ5
Splendid Performance!!!
— Anurag Thakur (@ianuragthakur) August 2, 2021
Women’s Hockey #TeamIndia is scripting history with every move at #Tokyo2020 !
We’re into the semi-finals of the Olympics for the 1st time beating Australia.
130 crore Indians to the
Women’s Hockey Team -
“we’re right behind you”! pic.twitter.com/vusiXVCGde
India's dream is coming to reality! Our Women's Hockey Team has defeated Australia! India's Men's and Women's teams have reached semi-finals at #Tokyo2020 Olympics! I have no words to express my excitement and happiness! https://t.co/3swWYTvH6O pic.twitter.com/bM6the9vh6
— Kiren Rijiju (@KirenRijiju) August 2, 2021