ಉಡುಪಿ: 135 ಮಂದಿ ಕೋವಿಡ್‌ಗೆ ಪಾಸಿಟಿವ್

ಉಡುಪಿ, ಆ.2: ಜಿಲ್ಲೆಯಲ್ಲಿ ಸೋಮವಾರ ಒಟ್ಟು 135 ಮಂದಿ ಕೋವಿಡ್‌ಗೆ ಪಾಸಿಟಿವ್ ಬಂದಿದ್ದಾರೆ. 97 ಮಂದಿ ಚಿಕಿತ್ಸೆಯ ಬಳಿಕ ಸೋಂಕಿ ನಿಂದ ಗುಣಮುಖರಾದರೆ, ಜಿಲ್ಲೆಯಲ್ಲಿ ಸೋಂಕಿಗೆ ಸಕ್ರಿಯಾರಾಗಿರುವವರ ಸಂಖ್ಯೆ ಈಗ 1238ಕ್ಕೇರಿದೆಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ದಿನದಲ್ಲಿ ಯಾರೂ ಸೋಂಕಿಗೆ ಬಲಿಯಾಗಿಲ್ಲ. ಇಂದು ಕೊರೋನ ಸೋಂಕು ದೃಢಪಟ್ಟ 135 ಮಂದಿಯಲ್ಲಿ 72 ಮಂದಿ ಪುರುಷರು ಹಾಗೂ 63 ಮಂದಿ ಮಹಿಳೆಯರು. ಇವರಲ್ಲಿ 67 ಮಂದಿ ಉಡುಪಿ ತಾಲೂಕು, 35 ಮಂದಿ ಕುಂದಾಪುರ ಹಾಗೂ 32 ಮಂದಿ ಕಾರ್ಕಳ ತಾಲೂಕಿನವರು. ಹೊರಜಿಲ್ಲೆಯ ಒಬ್ಬರು ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ.
ರವಿವಾರ 97 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 68,418ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 1249 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 70,073ಕ್ಕೇರಿದೆ ಎಂದು ಡಾ.ಉಡುಪ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 7,87,029 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
ಸೋಮವಾರ ಬ್ಲಾಕ್ ಫಂಗಸ್ ಸೋಂಕು ಯಾರಲ್ಲೂ ಪತ್ತೆಯಾಗಿಲ್ಲ. ಸದ್ಯ ಏಳು ಮಂದಿ ಮಣಿಪಾಲ ಕೆಎಂಸಿ ಹಾಗೂ ಉಡುಪಿಯ ಆದರ್ಶ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.







