ಪೊಲೀಸ್ ಠಾಣೆಗಳಲ್ಲಿ ಖಾಸಗಿ ಸಂಭ್ರಮಾಚರಣೆ ಮಾಡದಂತೆ ಆದೇಶ

ಬೆಂಗಳೂರು, ಆ.2: ಪೊಲೀಸ್ ಅಧಿಕಾರಿಗಳು ಆರೋಪಿಗಳ ಜತೆಗೆ ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಪೊಲೀಸ್ ಇಲಾಖೆ ಗಮನಕ್ಕೆ ಬಂದ ಬೆನ್ನಲ್ಲೇ ಪೊಲೀಸ್ ಠಾಣೆ, ಸರ್ಕಲ್ ಇನ್‍ಸ್ಪೆಕ್ಟರ್ ಕಚೇರಿ, ಎಸಿಪಿ ಕಚೇರಿಗಳಲ್ಲಿ ಇನ್ನು ಮುಂದೆ ಯಾವುದೇ ಖಾಸಗಿ ಕಾರ್ಯಕ್ರಮಗಳನ್ನು ಮಾಡದಂತೆ ರಾಜ್ಯ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.
ಪೊಲೀಸರೇ ಆರೋಪಿಗಳ ಜತೆಗೆ ಕಾಣಿಸಿಕೊಂಡರೇ ಮುಂದೆ ಏನು ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ. ಈ ನಡುವೆ ಪೊಲೀಸರ ಈ ನಡವಳಿಕೆಗೆ ಬ್ರೇಕ್ ಹಾಕುವುದಕ್ಕೆ ರಾಜ್ಯ ಡಿಜಿ ಮತ್ತು ಐಜಿಪಿ ಅವರು ಮುಂದಾಗಿದ್ದಾರೆ.
ಪ್ರವೀಣ್ ಸೂದ್ ಅವರ ಆದೇಶವನ್ನು ರಾಜ್ಯದ ಎಲ್ಲ ಪೊಲಿಸ್ ಸಿಬ್ಬಂದಿ, ಅಧಿಕಾರಿಗಳು ಪಾಲಿಸಬೇಕಿದೆ.
Next Story





