ದ.ಕ. ಜಿಲ್ಲೆ: ಕೋವಿಡ್ಗೆ ನಾಲ್ಕು ಬಲಿ; 219 ಮಂದಿಗೆ ಕೊರೋನ ಸೋಂಕು
![ದ.ಕ. ಜಿಲ್ಲೆ: ಕೋವಿಡ್ಗೆ ನಾಲ್ಕು ಬಲಿ; 219 ಮಂದಿಗೆ ಕೊರೋನ ಸೋಂಕು ದ.ಕ. ಜಿಲ್ಲೆ: ಕೋವಿಡ್ಗೆ ನಾಲ್ಕು ಬಲಿ; 219 ಮಂದಿಗೆ ಕೊರೋನ ಸೋಂಕು](https://www.varthabharati.in/sites/default/files/images/articles/2021/08/2/301173-1627923322.jpg)
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಸೋಮವಾರ ಕೋವಿಡ್ನಿಂದಾಗಿ ನಾಲ್ವರು ಮೃತಪಟ್ಟಿದ್ದು, 219 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಶೇ.3.66 ಪಾಸಿಟಿವಿಟಿ ದರವಿದೆ.
ಜಿಲ್ಲೆಯಲ್ಲಿ 210 ಮಂದಿ ಸೋಮವಾರ ಗುಣಮುಖರಾಗಿದ್ದು, ಇಲ್ಲಿಯವರೆಗೆ ಒಟ್ಟು 96,617 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್ನಿಂದಾಗಿ 1434 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1,00,999 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 2948 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.
Next Story