400 ಮೀಟರ್ ಹರ್ಡಲ್ ರೇಸ್: ತನ್ನದೇ ವಿಶ್ವ ದಾಖಲೆ ಮುರಿದು ಚಿನ್ನ ಗೆದ್ದ ನಾರ್ವೆಯ ಕಾರ್ಸ್ಟನ್ ವಾರ್ಹೋಮ್

ಕಾರ್ಸ್ಟನ್ ವಾರ್ಹೋಮ್ (Photo : Twitter/@SuperSportTV)
ಟೋಕಿಯೊ: ಪುರುಷರ 400 ಮೀಟರ್ ಹರ್ಡಲ್ಸ್ನಲ್ಲಿ ಮಂಗಳವಾರ ಒಂದಲ್ಲ ಎರಡು ಹಳೆಯ ದಾಖಲೆಗಳು ಮುರಿಯಲ್ಪಟ್ಟವು, ಇದು ಸಾರ್ವಕಾಲಿಕ ಶ್ರೇಷ್ಠ ಒಲಿಂಪಿಕ್ ರೇಸ್ಗಳಲ್ಲಿ ಒಂದೆನಿಸಿಕೊಂಡಿತು.
ನಾರ್ವೆಯ ಕಾರ್ಸ್ಟನ್ ವಾರ್ಹೋಮ್ ಒಲಿಂಪಿಕ್ಸ್ ನಲ್ಲಿ 400 ಮೀ. ಹರ್ಡಲ್ಸ್ನಲ್ಲಿ 45.94 ಸೆಕೆಂಡುಗಳಲ್ಲಿ ಗುರಿ ತ ಲುಪಿ ತನ್ನದೇ ವಿಶ್ವ ದಾಖಲೆಯನ್ನು ಅಳಿಸಿಹಾಕಿದರು. ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು.
ಎರಡನೇ ಸ್ಥಾನದಲ್ಲಿರುವ ಅಮೆರಿಕದ ರಾಯ್ ಬೆಂಜಮಿನ್ 46.17 ಸೆಕೆಂಡ್ ನಲ್ಲಿ ರೇಸ್ ಮುಗಿಸಿದರು. ಕಳೆದ ತಿಂಗಳಷ್ಟೇ ವಾರ್ ಹೋಮ್ ನಿರ್ಮಿಸಿದ್ದ ದಾಖಲೆಯನ್ನು ಉತ್ತಮಪಡಿಸಿಕೊಂಡರು.
Next Story