ಅರಣ್ಯ ಸಂಚಾರಿ ದಳದ ಕಾರ್ಯಾಚರಣೆ: ಆರೋಪಿ ಬಂಧನ, ಜಿಂಕೆ ಚರ್ಮ ವಶಕ್ಕೆ

ಪುತ್ತೂರು: ಅಕ್ರಮ ಜಿಂಕೆ ಚರ್ಮ ಮಾರಾಟ ಪ್ರಕರಣವೊಂದನ್ನು ಮಂಗಳವಾರ ಪತ್ತೆ ಹಚ್ಚಿದ ಪುತ್ತೂರು ಅರಣ್ಯ ಸಂಚಾರ ದಳದ ತಂಡವು ಆರೋಪಿಯೊಬ್ಬನನ್ನು ಬಂಧಿಸಿ ಆತನಿಂದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಜಿಂಕೆ ಚರ್ಮವೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಖಚಿತ ವರ್ತಮಾನದ ಮೇರೆಗೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಸ್ಸು ನಿಲ್ದಾಣದ ಬಳಿಯಲ್ಲಿ ಜಿಂಕೆ ಚರ್ಮ ಮಾರಾಟ ನಡೆಸಲು ಯತ್ನಿಸುತ್ತಿದ್ದ ಬೆಳಗಾವಿ ನಿವಾಸಿ ಹನುಮಂತ(31) ಬಂಧಿತ ಆರೋಪಿ. ಈತನನ್ನು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪುತ್ತೂರು ಅರಣ್ಯ ಸಂಚಾರಿದಳದ ಎಸ್.ಐ. ಜಾನಕಿನೇತೃತ್ವದಲ್ಲಿ ಸಿಬ್ಬಂದಿಗಳಾದ ಸುಂದರ ಶೆಟ್ಟಿ, ವಿಜಯ ಸುವರ್ಣ, ಉದಯ ಕುಮಾರ್ ಮತ್ತು ಸಂತೋಷ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Next Story





