ದ.ಕ.: ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಆಗಮನ

ಮಂಗಳೂರು, ಆ.3: ಕೇಂದ್ರ ಮೀಸಲು ಪಡೆಯ ವಿಶೇಷ ವಿಭಾಗವಾದ ರ್ಯಾಪಿಡ್ ಆ್ಯಕ್ಷನ್ ಫೋರ್ಸ್‌ನ (ಆರ್‌ಎಎಫ್) ತುಕಡಿಯು ದ.ಕ. ಜಿಲ್ಲೆಗೆ ಮಂಗಳವಾರ ಪ್ರವೇಶಿಸಿದೆ. ಜಿಲ್ಲೆಯ ತಲಪಾಡಿ ಚೆಕ್‌ಪೋಸ್ಟ್ ಸಹಿತ ಹಲವೆಡೆ ಪಥಸಂಚಲನ ನಡೆಸಿತು.
ಮುಂದಿನ ಒಂದು ವಾರದವರೆಗೆ ಈ ಆರ್‌ಎಎಫ್ ತುಕಡಿಯು ಜಿಲ್ಲೆಯಲ್ಲಿದ್ದು ಕಾರ್ಯಾಚರಣೆ ನಡೆಸಲಿದೆ. ಆಯಕಟ್ಟಿನ ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.








