ಹುಣಸೋಡು ಸ್ಫೋಟ ಪ್ರಕರಣ: ಹಾನಿಗೊಳಗಾಗಿರುವ ಮನೆಗಳಿಗೆ ಪರಿಹಾರ ನೀಡುವಂತೆ ಒತ್ತಾಯ

ಶಿವಮೊಗ್ಗ, ಆ.3: ಇತ್ತೀಚೆಗೆ ಹುಣಸೋಡು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಿಗೊಳಗಾಗಿರುವ ಮನೆಗಳಿಗೆ ತಕ್ಷಣ 5 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ನವ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಗೋ.ರಮೇಶ್‌ಗೌಡ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಣಸೋಡು ಸ್ಪೋಟ ಪ್ರಕರಣದಿಂದ ಹಲವಾರು ಮನೆಗಳು ಹಾನಿಗೊಳಗಾಗಿವೆ. ಸುಮಾರು ೮೫೦ ಸಂತ್ರಸ್ಥರು ಪರಿಹಾರಕ್ಕಾಗಿ ಅರ್ಜಿ ಹಾಕಿದ್ದಾರೆ. ಆದರೆ ಸರ್ಕಾರ ಈ ಅರ್ಜಿಯನ್ನು ಪರಿಗಣಿಸುತ್ತಿಲ್ಲ. ಹಣ ನೀಡಿದರೆ ಎಲ್ಲಿ ನಮ್ಮ ತಪ್ಪು ಸಾಬೀತು ಆಗುತ್ತದೆಯೋ ಎಂಬ ಭಯದಲ್ಲಿದ್ದಾರೆ ಎಂದು ದೂರಿದರು.
ಸ್ಪೋಟದಿಂದ ಹಾನಿಗೊಳಗಾಗಿದ್ದ ಮನೆಗಳು ಇಂದು ಮಳೆ ಹೆಚ್ಚಾದ ಕಾರಣ ಪೂರ್ಣ ನೆಲಸಮವಾಗಿವೆ. ನೂರಾರು ಮನೆಗಳು ಬೀಳುವ ಹಂತದಲ್ಲಿದೆ. ಜಿಲ್ಲಾಡಳಿತ ಇದನನು ನೋಡಿಕೊಂಡು ಸುಮ್ಮನಿದೆ. ತಕ್ಷಣವೇ ನೆಲಸಮವಾಗಿರುವ ಮನೆಗಳಿಗೆ ೫ ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಬಾಗಶಹಃ ಹಾನಿಗೊಳಗಾದ ಮನೆಗಳಿಗೂ ಪರಿಹಾರ ನೀಡಬೇಕು ಮತ್ತು ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾವ ತನಿಖೆಯೂ ನಡೆಸಿಲ್ಲ. ಶೀಘ್ರವೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಸಂತೋಷ್, ನಯನ, ಕುಮಾರ್, ಶಾಹಿಬ್, ಭಾಸ್ಕರ್ ಸೇರಿದಂತೆ ಹಲವರಿದ್ದರು.







