ನೀರುಮಾರ್ಗ: ಜಲಜೀವನ್ ಮಿಶನ್ ಯೋಜನೆಗೆ ಚಾಲನೆ

ಮಂಗಳೂರು, ಆ.3: ನೀರುಮಾರ್ಗ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 3.60 ಕೋ.ರೂ. ವೆಚ್ಚದ ಜಲಜೀವನ್ ಮಿಶನ್ ಯೋಜನೆಗೆ ಶಾಸಕ ಡಾ.ಭರತ್ ಶೆಟ್ಟಿ ಮಂಗಳವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯ ಕನಸಿನ ಕೂಸು ಜಲಜೀವನ್ ಯೋಜನೆಯಾಗಿದೆ. ಬೊಂಡಂತಿಲ ಗ್ರಾಮದಲ್ಲಿ 149.50 ಲಕ್ಷ ರೂ.ಹಾಗೂ ನೀರುಮಾರ್ಗ ಗ್ರಾಮದಲ್ಲಿ 210.99 ಲಕ್ಷ ರೂ. ಅನುದಾನದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂದರು.
ಈ ಸಂದರ್ಭ ನೀರುಮಾರ್ಗ ಗ್ರಾಪಂ ಅಧ್ಯಕ್ಷೆ ಧನವಂತಿ, ಉಪಾಧ್ಯಕ್ಷೆ ಯಶೋಧಾ, ಫಲಾನುಭವಿಗಳ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಗೋಕುಲ್ದಾಸ್ ಶೆಟ್ಟಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸಚಿನ್ ಹೆಗ್ಡೆ, ಸದಸ್ಯರಾದ ಚೇತನ್ ನಟ್ಟಿಲ್, ಕಿಶೋರ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Next Story





